ದೊಡ್ಡ ಸುದ್ದಿ ಲೈಫ್ ಸ್ಟೈಲ್

ಪ್ರೇಮಿಗಳ ದಿನದಂದು ಸೆಕ್ಸ್‌ಗೆ ಬೂಸ್ಟ್ ಕೊಡುವ ಐಟಂಗಳು !

ಅಂತಹ ಯಾವೆಲ್ಲಾ ಆಹಾರಗಳು ಲೈಂಗಿಕ ಶಕ್ತಿ ಹೆಚ್ಚಿಸುತ್ತದೆ ಎಂಬುದನ್ನು ನೀವೇ ನೋಡಿ… ಈ ಆಹಾರಗಳನ್ನು ಸೇವಿಸಿ ನಿಮ್ಮ ಸಂಗಾತಿ ಜೊತೆ ಇಂದು ಹಾಟ್‌ – ಸ್ಟೀಮಿ ವ್ಯಾಲಂಟೈನ್‌ ಡೆ ಆಚರಿಸಿ…

ಡಾರ್ಕ್‌ ಚಾಕಲೇಟ್ : ಲೈಂಗಿಕ ತಜ್ಞರ ಪ್ರಕಾರ ಹಾಸಿಗೆಯ ಮೇಲೆ ಮಲಗಿದ ಬಳಿಕ ಅಲ್ಪ ಸಮಯದಲ್ಲಿಯೇ ಲೈಂಗಿಕ ಬಯಕೆ ಹೆಚ್ಚಿಸಲು ಡಾರ್ಕ್‌ ಚಾಕಲೇಟ್‌ ಸಹಾಯಮಾಡುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ ಮತ್ತು ಫೈಟೋ ನ್ಯೂಟ್ರಿಯೆಂಟ್‌ಗಳು ಆರೋಗ್ಯಕ್ಕೆ ಪೂರಕವಾಗಿದ್ದರೆ ಉತ್ತಮ ಪ್ರಮಾಣದಲ್ಲಿರುವ ಮೆಗ್ನೀಶಿಯಂ ಶರೀರದ ಎಲ್ಲಾ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಪರಿಣಾಮವಾಗಿ ಲೈಂಗಿಕ ಬಯಕೆ ಹೆಚ್ಚಾಗುತ್ತದೆ.

ಜೇನು : ಬಿ ವಿಟಮಿನ್‌ ಅಧಿಕವಾಗಿರುವ ಜೇನು ಮನುಷ್ಯರ ಲೈಂಗಿಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ.  ಇದರಿಂದ ಸೆಕ್ಸ್‌ ಮಾಡಲು ಉತ್ತೇಜನ ಸಿಗುತ್ತದೆ.

ಬಾದಾಮಿ : ಬಾದಾಮಿಯ ನಿಯಮಿತ ಸೇವನೆಯಿಂದ ಹೃದಯಬಡಿತ ಮತ್ತು ರಕ್ತಸಂಚಾರ ಉತ್ತಮಗೊಳ್ಳುತ್ತದೆ. ಜೊತೆಗೇ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ದೇಹದ ಇತರ ಭಾಗಗಳ ಜೊತೆಗೆ ಜನನಾಂಗಗಳಿಗೂ ಉತ್ತಮ ರಕ್ತಪೂರೈಕೆಯಾಗಿ ಲೈಂಗಿಕ ಶಕ್ತಿ ಹೆಚ್ಚುತ್ತದೆ.

ಸ್ಟ್ರಾಬೆರಿ : ಸ್ಟ್ರಾಬೆರಿ ಹಣ್ಣಿನಲ್ಲಿ ವಿಟಮಿನ್ ಬಿ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಇದು ನರ ಮತ್ತು ಸ್ನಾಯುಗಳ ಕಾರ್ಯಕ್ಷಮತೆ ಹೆಚ್ಚಿಸಲು ನೆರವಾಗುತ್ತದೆ. ವಿಶೇಷವಾಗಿ ನರಗಳು ಸಡಿಲಗೊಂಡು ರಕ್ತಸಂಚಾರ ಹೆಚ್ಚಿ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ.

ಕ್ಯಾರೆಟ್ : ಕ್ಯಾರೆಟ್ ಹಸಿಯಾಗಿ ಅಥವಾ ಜ್ಯೂಸ್ ಮಾಡಿಕೊಂಡು ಕುಡಿಯಬಹುದು. ಇದು ಲೈಂಗಿಕ ಶಕ್ತಿ ಹೆಚ್ಚಿಸಲು ರಾಮಬಾಣವಾಗಿ ಕಾರ್ಯ ನಿರ್ವಹಿಸುತ್ತದೆ.

ಮೀನು : ಮೀನಿನಲ್ಲಿರುವ ಒಮೆಗಾ-3 ಕೊಬ್ಬಿನ ತೈಲ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ. ರಾತ್ರಿಯ ಊಟದಲ್ಲಿ ಸಾಕಷ್ಟು ಮೀನು ಇರುವಂತೆ ನೋಡಿಕೊಳ್ಳುವ ಮೂಲಕ ಲೈಂಗಿಕ ಶಕ್ತಿ ಉತ್ತೇಜಿಸಿಕೊಳ್ಳಬಹುದು.

ಡ್ರೈ ಫ್ರುಟ್ಸ್‌ : ವಿವಿಧಡ್ರೈ ಫ್ರುಟ್ಸ್‌ಗಳನ್ನು ಸಮಾಗಮಕ್ಕೂ ಕೊಂಚ ಮೊದಲು ಸೇವಿಸುವುದರಿಂದ ದೇಹದಲ್ಲಿ ವಿವಿಧ ಕೊಬ್ಬಿನ ಆಮ್ಲಗಳು ಲಭ್ಯವಾಗುತ್ತವೆ. ಇವು ಮಿಲನ ಕ್ರಿಯೆಗೆ ಅಗತ್ಯವಾದ ಹಾರ್ಮೋನುಗಳನ್ನು ಸ್ರವಿಸುವಂತೆ ಮಾಡಿ ಲೈಂಗಿಕ ಕ್ರಿಯೆಯನ್ನು ಸಂತೋಷಕರವಾಗಿರಲು ಸಹಕರಿಸುತ್ತವೆ.

ಈ ಎಲ್ಲಾ ಆಹಾರಗಳನ್ನು ಸೇವಿಸಿ ನಿಮ್ಮ ದಿನವನ್ನು ಮತ್ತಷ್ಟು ಬಿಸಿ ಬಿಸಿಯಾಗುವಂತೆ ಮಾಡಿ. ಆ ಮೂಲಕ ವ್ಯಾಲಂಟೈನ್‌ ಡೇ ಸ್ಮರಣೀಯವಾಗಿಸಿ.