ರಾಜಮೌಳಿ ಬಾಹುಬಲಿ 2 ನಂತರ ‘ಗರುಡ’ ಎನ್ನೋ ಸಿನಿಮಾ ಮಾಡ್ತಿದ್ದಾರೆ. ಬಾಹುಬಲಿ ಮೂಲಕ ದೇಶದ ಗಮನ ಸೆಳೆದ ರಾಜಮೌಳಿ ‘ಗರುಡ’ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲು ಯೋಜಿಸುತ್ತಿದ್ದಾರಂತೆ. ಇನ್ನು ಆ ‘ ಗರುಡ’ಗೆ ಹೀರೋ ಯಾರು ಗೊತ್ತಾ….ಟಾಲಿವುಡ್ ಯಂಗ್ ಟೈಗರ್ ಜ್ಯೂನಿಯರ್ ಎನ್‌ಟಿಆರ್!
ಬಾಹುಬಲಿ 1,2ಗಳಿಗಾಗಿ ಪ್ರಭಾಸ್ ಮೂರ್ನಾಲ್ಕು ವರ್ಷದ ಕಾಲ್‌ಶೀಟ್ ರಾಜಮೌಳಿಗೆ ಕೊಟ್ಟರೆ, ಜ್ಯೂನಿಯರ್ ಎನ್‌ಟಿಆರ್ ‘ಗರುಡ’ಗೆ ಮೂರು ವರ್ಷ ಮೀಸಲಿಡಲು ಸಜ್ಜಾಗುತ್ತಿದ್ದಾರಂತೆ. ಈಗ ಜ್ಯೂನಿಯರ್ ಎನ್‌ಟಿಆರ್ ‘ ಜನತಾ ಗ್ಯಾರೇಜ್’ ಎನ್ನೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದಾದ ಮೇಲೆ ಪೂರಿ ಜಗನ್ನಾಥ್ ಚಿತ್ರದಲ್ಲಿ ನಟಿಸುವ ಸುದ್ದಿ ಇದೆ. ಇವು ಮುಗಿಯುವುದರೊಳಗೆ ಮುಂದಿನ ವರ್ಷಕ್ಕೆ ರಾಜಮೌಳಿ ‘ ಬಾಹುಬಲಿ 2’ ಮುಗಿಸಿ ‘ಗರುಡ’ಕ್ಕೆ ರೆಡಿಯಾಗ್ತಾರಂತೆ.
ರಾಜಮೌಳಿ ‘ಗರುಡ’ ಶೂಟಿಂಗ್ ಆರಂಭಿಸಿದ ನಂತರ ಎನ್‌ಟಿಆರ್ 3 ವರ್ಷ ಯಾವ ಸಿನಿಮಾದಲ್ಲಿ ನಟಿಸಲ್ಲ. ನಟಿಸಲ್ಲ ಅಂದ್ಮೇಲೆ ಆ ಮೂರು ವರ್ಷ ಅಂದ್ರೆ ಹೆಚ್ಚು ಕಡಿಮೆ 2019ರವರಗೆ ಎನ್‌ಟಿಆರ್ ಸ್ಕ್ರೀನ್ ಮೇಲೆ ಕಾಣಲ್ಲ. ಈ ವರ್ಷದ ನಂತರ ಎನ್‌ಟಿಆರ್ ಸ್ಕ್ರೀನ್ ಮೇಲೆ ಕಾಣೋದು 2019ರ ಹೊತ್ತಿಗೆ ರಿಲೀಸ್ ಆಗೋ ‘ಗರುಡ’ದಲ್ಲಿ ಎನ್ನೋದು ಟಾಲಿವುಡ್ ಟಾಕ್. ಆದರೆ ಈ ಬಗ್ಗೆ ಅಫಿಷಿಯಲ್ ಅನೌನ್ಸ್‌ಮೆಂಟ್ ಹೊರಬಿದ್ದಿಲ್ಲ.
ರಾಜಮೌಳಿ ಈ ಹಿಂದೆ ಎನ್‌ಟಿಆರ್‌ಗೆ ಸ್ಟೂಡೆಂಟ್ ನಂಬರ್ 1, ಸಿಂಹಾದ್ರಿ, ಯಮದೊಂಗದಂತಹ ಸೂಪರ್ ಹಿಟ್ ಚಿತ್ರ ಕೊಟ್ಟಿದ್ದರು.