ದೊಡ್ಡ ಸುದ್ದಿ ಹೊಸ ಸುದ್ದಿ

ರೈಲಿನಲ್ಲೂ ಇನ್ನೂ ಮುಂದೆ ಮನೆಯ ಸವಲತ್ತು!

ಭಾರತೀಯ ರೈಲ್ವೆ ಇಲಾಖೆ ಎಂದಾಕ್ಷಣ ಮನಸ್ಸಿನ ಮೂಲೆಯಲ್ಲಿ ಘಾಟು ವಾಸನೆಯೊಂದು ಬೀರುತ್ತಾ ರೈಲು ಬದುಕಿನ ಪುಟಗಳನ್ನು ಎಂಡ್ ಮಾಡುವ ವಿಷ್ಯಾ ಕಾಮನ್ ಆಗಿ ನೋಡಿರಬಹುದು.

ಆದರೆ ಈ ಬಾರಿಯಂತೂ ರೈಲ್ವೆಯಲ್ಲಿ ಪ್ರಯಾಣ ಬೆಳೆಸುವ ಮಂದಿಗಳಂತೂ ಖುಷಿಯ ವಿಷ್ಯಾ ಇದೆ. ಈ ತಿಂಗಳಲ್ಲಿ ರೈಲ್ವೆ ಬಜೆಟ್ ವ್ಯವಸ್ಥೆಯಲ್ಲಿ ‘ಸ್ಮಾರ್ಟ್ ಕೋಚಸ್’ ಎನ್ನುವ ಹೊಸ ಯೋಜನೆಯೊಂದು ಗರಿ ಕೆದರಳಿದೆ. ಈ ಮೂಲಕ ರೈಲಿನಲ್ಲಿ ಪ್ರಯಾಣ ಬೆಳೆಸುವುದು ಕೂಡ ಮನೆಯಲ್ಲಿ ನಿಂತು ಆರಾಮಾವಾಗಿ ಹೋಗುವಂತಹ ಫೀಲ್‌ನೆಸ್ ನಿಮ್ಮಲ್ಲಿ ಮೂಡಬಹುದು.

ಅಂದಹಾಗೆ ಜಿಪಿಎಸ್ ಆಲಾರಂ ವ್ಯವಸ್ಥೆ, ಎಲ್‌ಇಡಿ ಮಾದರಿ ರಿಸರ್ವ್‌ವೇಶನ್ ಸಿಸ್ಟಂ, ವೈಫ್ ವ್ಯವಸ್ಥೆ, ಲ್ಯಾಪ್‌ಟಾಪ್, ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ, ಅಟೋಮೆಟಿಕ್ ಡೋರ್, ಮೈಕ್ರೋಪ್ರೋಸೆಸರ್‌ನಿಂದ ಕೂಡಿದ ಎಸಿ ಕೋಚ್‌ಗಳು ಇಲ್ಲದೆ. ಜತೆಗೆ ಬಯೋ ಟಾಯ್ಲೆಟ್, ಅಟೋಮೆಟಿಕ್ ರೀತಿಯಲ್ಲಿ ಸೋಪು ನಿಮ್ಮ ಕೈಗೆ ಬೀಳುವಂತಹ ವ್ಯವಸ್ಥೆ, ಸಿಸಿಟಿವಿಗಳು ಈ ಕೋಚ್‌ನಲ್ಲಿ ಕಾಣಸಿಗಲಿದೆ.