ಇದುವರೆಗೂ ಒಂದು ಬಾರಿ ಒಬ್ಬರಿಗೆ ನಿಗದಿಯಾದ ಟಿಕೆಟ್ಗಳನ್ನು ಬೇರೆ ಯವರಿಗೆ ಹಸ್ತಾಂತರ ಮಾಡುವಂತಿರಲಿಲ್ಲ. ಆದರೆ, ಈ ನಿಯಮದಲ್ಲಿ
ರೈಲ್ವೆ ಇಲಾಖೆ ತುಸು ಬದಲಾವಣೆ ಮಾಡಿದೆ.
ಕಾಯ್ದಿರಿಸಿದ ಟಿಕೆಟ್ನ್ನು ಇನ್ನು ಬೇರೆಯವರಿಗೆ ವರ್ಗಾವಣೆ ಮಾಡ ಬಹುದು. ಆದರೆ ಬೇಕಾಬಿಟ್ಟಿ ವರ್ಗಾ ವಣೆ ಮಾಡಲು ಬರುವುದಿಲ್ಲ. ಕೊನೆ
ಗಳಿಗೆಯಲ್ಲಿ ನೀವು ಪ್ರವಾಸ ಮೊಟಕು ಗೊಳಿಸಿದಲ್ಲಿ , ನೀವು ಕಾಯ್ದಿರಿಸಿದ ಟಿಕೆಟ್ ಅನ್ನು ನಿಮ್ಮ ಮಗ, ಮಗಳು, ತಂದೆ, ತಾಯಿ, ಹೆಂಡತಿ
ಅಥವಾ ಗಂಡನಿಗೆ ವರ್ಗಾವಣೆ ಮಾಡಬಹುದು.
ವರ್ಗಾವಣೆ ಹೇಗೆ?
ನೀವು ಕಾಯ್ದಿರಿಸಿದ ಟಿಕೆಟ್ ಅನ್ನು ೨೪ ಗಂಟೆ ಮೊದಲೇ ಸಂಬಂಧ ಪಟ್ಟ ಅಧಿ ಕಾರಿಗಳಿಗೆ ಟಿಕೆಟ್ ಬದಲಾಯಿಸಲು ಕಾರಣ ಏನು ಅನ್ನುವ ಬಗ್ಗೆ ಅರ್ಜಿ ಸಲ್ಲಿಸಿ, ವರ್ಗಾವಣೆಗೆ ಗುರುತಿನ ಚೀಟಿ ಸಲ್ಲಿಸಿ ಟಿಕೆಟ್ ವರ್ಗಾವಣೆ ಮಾಡಿಸಿ ಕೊಳ್ಳಬಹುದು. ಆದರೆ ರಕ್ತ ಸಂಬಂಧಿ ಗಳನ್ನು ಬಿಟ್ಟು ಬೇರೆಯವರಿಗೆ ವರ್ಗಾವಣೆ ಮಾಡುವಂತಿಲ್ಲ. ಪ್ರಮುಖ ನಿಲ್ದಾಣಗಳ ಚೀಫ್ ರಿಜರ್ವೆಶನ್ ಸೂಪರ್ವೈಸರ್, ಟಿಕೆಟ್ ಬದಲಾವಣೆ ಮಾಡುವ ಅಧಿಕಾರ ಹೊಂದಿರುತ್ತಾರೆ.
ಸರಕಾರಿ ನೌಕರರಾಗಿದ್ದಲ್ಲಿ ಕಾಯ್ದಿರಿ ಸಿದ ಟಿಕೆಟ್ ಬದಲಾಯಿಸಲು, ಮೇಲಿನ ಅಧಿಕಾರಿಯಿಂದ ೨೪ ಗಂಟೆ ಮುಂಚಿತ ವಾಗಿ ಲಿಖಿತ ಅರ್ಜಿ ಸಲ್ಲಿಸಬೇಕು. ಒಂದೊಮ್ಮೆ ಪ್ರಮಾಣೀಕೃತ ಶಿಕ್ಷಣ ಸಂಸ್ಥೆಯಾಗಿದ್ದರೆ, ಆ ಶಿಕ್ಷಣ ಸಂಸ್ಥೆ ಮುಖ್ಯಸ್ಥರ ಲಿಖಿತ ಅರ್ಜಿಯನ್ನು ೪೮ ಗಂಟೆಯೊಳಗೆ ಸಲ್ಲಿಸಿ ಪಡೆಯಬಹುದು. ಟಿಕೆಟ್ ಕಾಯ್ದಿರಿಸಿದ ವ್ಯಕ್ತಿ ಕೊನೆ ಗಳಿಗೆಯಲ್ಲಿ ಹೋಗದೇ ಇದ್ದಾಗ ಸಂಬಂಧ ಪಟ್ಟವರಿಂದ ಲಿಖಿತರೂಪದಲ್ಲಿ ಅರ್ಜಿ ಸಲ್ಲಿಸಿಯೂ ಟಿಕೆಟ್ ವರ್ಗಾವಣೆ ಮಾಡಿಸಿಕೊಳ್ಳಬಹುದು. ಹೀಗೆ ಒಂದು ಬಾರಿ ಮಾತ್ರ ವರ್ಗಾವಣೆ ಮಾಡಿ ಸಿಕೊಳ್ಳಲು ಅವಕಾಶವಿದೆ.
ರೈಲ್ವೆ ಇಲಾಖೆಯಿಂದ ಮಹತ್ವದ ಆದೇಶ: ಟಿಕೆಟ್ ಮತ್ತೊಬ್ಬರಿಗೆ ಕೊಡಬಹುದು
