ಸಿನಿಮಾ ಸುದ್ದಿ

ನಾನು ಡೈರೆಕ್ಟರ್ ಕ್ಯಾಪ್ ಹಾಕ್ತಾನೆ: ಪಡೀಲ್ ಮಾತು

ತುಳುವಿನ ಕುಸಲ್ದರಸೆ ನವೀನ್ ಡಿ. ಪಡೀಲ್ ಮುಂದಿನ ವರ್ಷ ತುಳು ಹಾಸ್ಯ ಚಿತ್ರ ನಿರ್ದೇಶಿಸುವ ಕನಸು ಕಂಡಿದ್ದಾರೆ. ತುಳು, ಕನ್ನಡ ಸಿನಿಮಾ ಹಾಗೂ ನಾಟಕ ರಂಗದಲ್ಲಿ ಗಳಿಸಿದ ಅನುಭವದ ಆಧಾರದಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಒಂದು ತುಳು ಚಿತ್ರ ನಿರ್ದೇಶಿಸಬೇಕೆನ್ನುವ ಯೋಜನೆ ಬಂದಿದೆ ಎಂದು ನವೀನ್ ಡಿ. ಪಡೀಲ್ ತನ್ನ ಆಪ್ತರ ಜತೆಯಲ್ಲಿ ಹೇಳಿಕೊಂಡಿದ್ದಾರೆ.

ನವೀನ್ ಡಿ. ಪಡೀಲ್ ನಟಿಸಿದ ದಬಕ್ ದಬಾ, ಜುಗಾರಿ, ಏಸ, ಪಿಲಿ ಬೈಲು ಯಮುನಕ್ಕ, ಕುಸಲ್ದ ಜವನೆರ್ ತುಳು ಚಲನಚಿತ್ರದ ಚಿತ್ರೀಕರಣವಾಗಿದ್ದು ಬಿಡುಗಡೆಯ ದಿನಗಳಿಗಾಗಿ ಕಾಯುತ್ತಿವೆ. ತುಳು ಸಿನಿಮಾಗಳಲ್ಲಿ ಬ್ಯುಸಿಯಾಗಿ ನಾಟಕ ರಂಗವನ್ನೇನೂ ಮರೆತಿಲ್ಲ ಎನ್ನುವುದು ನವೀನ್ ಮಾತು. ಅಂದಹಾಗೆ ಐದು ಕನ್ನಡ, ಒಂದು ಮಲಯಾಳ ಸಿನಿಮಾದಲ್ಲೂ ನಟಿಸಿದ್ದಾರೆ.