ದೊಡ್ಡ ಸುದ್ದಿ • ಸಿಟಿ ಸುದ್ದಿ • ಹೊಸ ಸುದ್ದಿ

ಇನ್ನೂ ಮುಂದೆ ಕೆಸಿನೋ ಪ್ರವೇಶಕ್ಕೆ ವಯಸ್ಸು ಕಡ್ಡಾಯ

ಪ್ರವಾಸಿಗರ ಸ್ವರ್ಗ ಗೋವಾದಲ್ಲಿ 21ವರ್ಷ ಮೀರದವರಿಗೆ ಕೆಸಿನೊ ಪ್ರವೇಶ ನಿಷೇಧಿ ಸುವ ಕಾನೂನು ಸದ್ಯದಲ್ಲೇ ಜಾರಿಗೆಬರಲಿದೆ.
ಗೋವಾ ಗೃಹ ಸಚಿವಾಲಯವು ಈ ಕುರಿತ ಕರಡು ನಿಯಮಗಳನ್ನು ಸಿದಟಛಿಪಡಿಸಿದ್ದು ಮುಂದಿನ ಆರ್ಥಿಕ ವರ್ಷದಿಂದ ಕಾನೂನು ಜಾರಿಗೆ ಬರಲಿದೆ. “ಕರಡನ್ನು ನ್ಯಾಯಾಂಗ ಇಲಾಖೆಗೆ ಕಳಿಸಿ ಅಭಿಪ್ರಾಯ ಕೇಳಿದ್ದೆವು. ಕೆಲವು ಸಣ್ಣ ಪುಟ್ಟ ಬದಲಾವಣೆಯೊಂದಿಗೆ ಮುಂದಿನ ಹಣಕಾಸು ವರ್ಷದಿಂದ ಕಾನೂನು ಜಾರಿಗೊಳಿಸುತ್ತೇವೆ,” ಎಂದು ಗೃಹ ಇಲಾಖೆಯ ಸಹಾಯಕ ಕಾರ್‍ಯದರ್ಶಿ ಸಂಜೀವ್ ಗಾಡ್ಕರ್ ತಿಳಿಸಿದ್ದಾರೆ.

ಗೋವಾ ವಿಧಾನಸಭೆಯಲ್ಲಿ ಕಾನೂನು ಅಂಗೀಕಾರಗೊಂಡ ನಂತರ ಕೆಸಿನೊ ಪ್ರವೇಶಿಸುವ ವ್ಯಕ್ತಿಯು ತಾನು 21 ವರ್ಷ ಪೂರೈಸಿದ್ದೇನೆ ಎಂದು ದೃಢಪಡಿಸುವ ದಾಖಲೆ ಒಯ್ಯುವುದು ಕಡ್ಡಾಯವಾಗುತ್ತದೆ.