ಕ್ರೀಡಾ ಸುದ್ದಿ ದೊಡ್ಡ ಸುದ್ದಿ

ಲಿಮ್ಕಾ ದಾಖಲೆ ಸೇರಿದ ಕ್ರಿಕೆಟ್‌ ದೇವರ ಆತ್ಮಚರಿತ್ರೆ

ಹ್ಯಾಚೆಟ್ಟೆ ಇಂಡಿಯಾ 2014ರ ನವೆಂಬರ್‌ ತಿಂಗಳಲ್ಲಿ ಬಿಡುಗಡೆ ಮಾಡಿದ್ದ ಸಚಿನ್‌ ತೆಂಡೂಲ್ಕರ್‌ ಆತ್ಮಚರಿತ್ರೆ ‘ಪ್ಲೇಯಿಂಗ್‌ ಇಟ್‌ ಮೈ ವೇ’ ಲಿಮ್ಕಾ ದಾಖಲೆ ಸೇರಿದೆ. ಪುಸ್ತಕ ಕಾಲ್ಪನಿಕ ಹಾಗೂ ಕಾಲ್ಪನಿಕವಲ್ಲದ ವಿಭಾಗದಲ್ಲಿ ಲಿಮ್ಕಾ ದಾಖಲೆ ಪುಸ್ತಕ ಸೇರಿದೆ. ಅಂದಿನಿಂದ ಇಂದಿನವರೆಗೂ ಸುಮಾರು 1,50,289 ಪ್ರತಿಗಳು ಮಾರಾಟವಾಗಿವೆ.

ಪುಸ್ತಕದ ಮೂಲ ಬೆಲೆ 899. ಇಲ್ಲಿಯವರೆಗೆ ಸುಮಾರು 1,50,289 ಪುಸ್ತಕಗಳು ಮಾರಾಟವಾಗಿದ್ದು, ಸುಮಾರು 13.51 ಕೋಟಿ ರುಪಾಯಿ ವಹಿವಾಟು ನಡೆದಿದೆ.