ಸಿನಿಮಾ ಸುದ್ದಿ

ಸುತ್ತಾಟ ಸಾಕಾಯ್ತು.. ಮದುವೆಯಾಗೋ ಮನಸಾಯ್ತು..!

ಬಾಲಿವುಡ್‌ ಸುದ್ದಿಗಳ ಪ್ರಕಾರ ಕರಣ್ ಹಾಗೂ ಬಿಪಾಶಾ ಬಸು ತಮ್ಮ ರಿಲೇಶನ್‌ಶಿಪ್ ಬಗ್ಗೆ ಇತ್ತೀಚಿನ ದಿನಗಳಲ್ಲಿ ಗಂಭೀರವಾಗಿ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ದರಿಂದಾಗಿಯೇ ಅವರು ಮುಂದಿನ ತಿಂಗಳು ನಿಶ್ಚಿತಾರ್ಥ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬ ಸುದ್ದಿಗಳು ಹರಿದಾಡತ್ತಿವೆ.

ಇನ್ನು ಕರಣ್‌ ತನ್ನ ಮೊದಲ ಪತ್ನಿ ಜೆನ್ನಿಫರ್ ಜೊತೆ ಡೈವೊರ್ಸ್ ಬಗ್ಗೆ ಈಗಾಗಲೇ ಚರ್ಚೆ ನಡೆಸಿದ್ದಾರಂತೆ ಹಾಗಾಗಿ ತಮ್ಮ ಮಡದಿಯೊಟ್ಟಿಗೆ ಡೈವೋರ್ಸ್‌ ಪಡೆದ ಬಳಿಕ ಬಿಪಾಶಾ ಜೊತೆ ಸಪ್ತಪದಿ ತುಳಿಯಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.