ಮೊಬೈಲ್ನಿಂದ ಹೊರಸೂಸುವ ಕಿರಣಗಳು ಗಂಡಸ್ಥನದ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಪಾರ್ಟಿಲಿಟಿ ಏಕ್ಸ್ಪರ್ಟ್ಸ್ ಸಂಶೋಧನಾ ತಂಡ ತನ್ನ ವರದಿಯಲ್ಲಿ ಎಚ್ಚರಿಸಿದೆ. ಅತಿಯಾದ ಮೊಬೈಲ್ ಬಳಕೆ ಹಾಗೂ ಮೊಬೈಲ್ನ್ನು ತಮ್ಮ ಪ್ಯಾಂಟಿನ ಮುಂದಿನ ಜೇಬಿನಲ್ಲಿ ಇಟ್ಟುಕೊಳ್ಳುವ ಅಭ್ಯಾಸವಿರುವ ಗಂಡಸರಲ್ಲಿ ನಪುಂಸಕತೆ ಕಂಡು ಬಂದಿದೆ ಎಂದೂ ವರದಿ ತಿಳಿಸಿದೆ.ಸಂಶೋಧನೆ ಪ್ರಕಾರ ಬಹುತೇಕ ಪುರಷರು ತಮ್ಮ ಮೊಬೈಲ್ನ್ನು ಮುಂದಿನ ಜೇಬಿನಲ್ಲಿಟ್ಟುಕೊಳ್ಳುತ್ತಾರೆ. ಇದರಿಂದಾಗಿ ಮೊಬೈಲ್ನಿಂದ ಹೊರ ಬರುವ ವಿಕಿರಣಗಳು ಪುರಷರ ವೀರ್ಯ ಉತ್ಪತ್ತಿ ಪ್ರಮಾಣ ಕಡಿಮೆ ಮಾಡಿ, ಪುರುಷತ್ವದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಪಾರ್ಟಿಲಿಟಿ ಏಕ್ಸ್ಪರ್ಟ್ಸ್ ತಂಡ ತನ್ನ ಸಂಶೋಧನೆಯಲ್ಲಿ ತಿಳಿಸಲಾಗಿದೆ.
ಹುಷಾರಾಗಿರಪ್ಪೋ! ಮೊಬೈಲ್ನಿಂದ ನಿಮ್ಮ ಪುರುಷತ್ವಕ್ಕೆ ಕಾದಿದೆ ಆಪತ್ತು!
February 23, 2016
646 Views
-
Share This!













