ಸಿನಿಮಾ ಸುದ್ದಿ

ರಣವೀರ್‌ಗೂ ಇದೆ ಬ್ಯಾಡ್‌ ಹ್ಯಾಬಿಟ್‌!

ಅದೇನಪ್ಪಾ ಅಂದ್ರೆ ರಣವೀರ್‌ ಏಳೋದು ಮಧ್ಯಾಹ್ನ ಬರೋಬ್ಬರಿ 12 ಗಂಟೆಗೆ ಅಂತೆ. ರಾತ್ರಿ ತುಂಬ ಲೇಟಾಗಿ ಮಲಗಿ ಬೆಳಗ್ಗೆ ತುಂಬ ಲೇಟಾಗಿ ಏಳೋ ಕ್ಯಾಟಗರಿಗೆ ಸೇರ್ತಾರೆ ರಣವೀರ್‌. 12 ಗಂಟೆಯ ಮೊದಲು ಇವರ ದಿನಚರಿ ಶುರು ಆಗೋದೆ ಇಲ್ವಂತೆ.

ಈ ಒಂದು ಬ್ಯಾಡ್‌ ಹ್ಯಾಬಿಟ್‌ನಿಂದ ಹೊರಬರಲು ರಣವೀರ್‌ ಶತಾಯ ಗತಾಯ ಪ್ರಯತ್ನ ಮಡುತ್ತಿದ್ದಾರಂತೆ. ಆದರೂ ಅವರಿಂದ ಬೆಳಗ್ಗೆ ಬೇಗ ಏಳಲು ಆಗುತ್ತಿಲ್ವಂತೆ. ಒಂದಲ್ಲ ಒಂದು ದಿನ ಇದರಿಂದ ಮುಕ್ತಿ ಪಡೆಯುತ್ತೇನೆ ಎಂದು ಭರವಸೆ ನೀಡುತ್ತಾರೆ ಈ ಬಾಜಿರಾವ್‌.