ಅದೇನಪ್ಪಾ ಅಂದ್ರೆ, ಬೆಬೋ ಕರಿನಾಳ ಫಸ್ಟ್ ಲವ್ ಐಸ್‌ಕ್ರೀಮ್ ಅಂತೆ. ಈ ಐಸ್‌ಕ್ರೀಮ್ ತನ್ನ ಪತಿ ಸೈಫ್‌ಗೂ ತುಂಬ ಇಷ್ಟವಂತೆ. ಕರಿನಾ ಚಿಕ್ಕವಳಿದ್ದಾಗ ಅಮ್ಮನ ಕಣ್ಣು ತಪ್ಪಿಸಿ ಕದ್ದು ಮುಚ್ಚಿ ಐಸ್‌ಕ್ರೀಮ್ ತಿನ್ನುತ್ತಿದ್ದರಂತೆ. ಮತ್ತು ಶಾಲೆಯಿಂದ ಮನೆಗೆ ತೆರಳುವ ಸಂದರ್ಭದಲ್ಲಿ ಕರಿನಾ ದಾರಿಯುದ್ದಕ್ಕೂ ಐಸ್‌ಕ್ರೀಮ್ ಸವಿಯುತ್ತ ಹೋಗುತ್ತಿದ್ದರಂತೆ.
ಈ ಎಲ್ಲ ವಿಚಾರವನ್ನ ಬೆಬೋ ಇತ್ತೀಚೆಗೆ ನಡೆದ ಒಂದು ಐಸ್‌ಕ್ರೀಮ್ ಬ್ರ್ಯಾಂಡ್‌ನ ಫ್ಲೆವರ್ ಬಿಡುಗಡೆಯ ಸಂದರ್ಭದಲ್ಲಿ ಹೇಳಿಕೊಂಡಳು. ಐಸ್‌ಕ್ರೀಮ್ ತನಗಷ್ಟೇ ಅಲ್ಲ ತನ್ನ ಪತಿಗೂ ಹೆಚ್ಚು ಇಷ್ಟವಾಗುತ್ತದೆ ಎಂದು ಹೇಳಿದ್ದಾಳೆ.