ಸಿನಿಮಾ ಸುದ್ದಿ

ಫರ್ಹಾನ್ ಕುಟುಂಬದಲ್ಲೂ ಬಿರುಕು !

ಬಾಲಿವುಡ್ ಅಂಗಳದ ನಟರ ಕುಟುಂಬ ದೆಸೆ ಏನೋ ಸರಿಯಿಲ್ಲ ಎನ್ನುವ ಮಾತು ಮತ್ತೆ ಫ್ರೂವ್ ಆಗುತ್ತಾ ಹೋಗುತ್ತಿದೆ. ಸುದೀರ್ಘ ದಾಂಪತ್ಯ ಬದುಕಿನ ಬಂಡಿಯಲ್ಲಿ ಹೋಗುತ್ತಿದ್ದ ಅರ್ಬಾಜ್ ಖಾನ್ ಹಾಗೂ ಮಲೈಕಾ ಅರೋರಾ ಕುಟುಂಬದಲ್ಲೂ ಬಿರುಕು ಮೂಡುತ್ತಾ ಒಡೆಯುವ ಚಾನ್ಸ್ ಗಟ್ಟಿಯಾಗುತ್ತಿದೆ ಎನ್ನುವ ಹೊತ್ತಿನಲ್ಲೇ ಮತ್ತೊಂದು ನಟನ ವೈವಾಹಿಕ ಬದುಕು ಕೂಡ ಒಡೆದು ಹೋಗಿದೆ.
ಹೌದು. ದಿಲ್ ಕಾ ಲಡ್ಕಾ ಎಂದೇ ಬಿಂಬಿತ ಫರ್ಹಾನ್ ಅಕ್ತರ್ ಹಾಗೂ ಕೇಶ ವಿನ್ಯಾಸಕಿ ಅಧುನಾ ಅಖ್ತರ್ ೧೫ ವರ್ಷಗಳ ದಾಂಪತ್ಯಕ್ಕೆ ಗುಡ್‌ಬೈ ಹೇಳಿದ್ದಾರೆ. ಫರ್ಹಾನ್ ಹಾಗೂ ಅಧುನಾ ೨೦೦೦ರಲ್ಲಿ ವಿವಾಹವಾಗಿದ್ದರು. ಫರ್ಹಾನ್ ನಿರ್ದೇಶಿಸಿದ್ದ ಮೊದಲ ಚಿತ್ರ ‘ದಿಲ್ ಚಾಹತಾ ಹೈ’ ಚಿತ್ರೀಕರಣ ವೇಳೆ ಪರಸ್ಪರ ಪ್ರೀತಿಸಿ ದಾಂಪತ್ಯ ಜೀವನ ಪ್ರವೇಶಿಸಿದ್ದರು. ಇವರಿಬ್ಬರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಇದೀಗ ಪರಸ್ಪರ ಸಮ್ಮತಿಯೊಂದಿಗೆ ಬೇರ್ಪಡಲು ನಿರ್ಧರಿಸಿದ್ದಾರೆ ಎನ್ನುವ ವಿಚಾರವನ್ನು ಮಾಧ್ಯಮಗಳಿಗೆ ಅವರು ಬಹಿರಂಗ ಪಡಿಸಿದ್ದಾರೆ.
ಇಬ್ಬರ ನಡುವೆ ವಿಚ್ಛೇಧನ ನಡೆದರೂ ಕೂಡ ಫರ್ಹಾನ್ ಹಾಗೂ ಅಧುನಾ ಇಬ್ಬರು ಜತೆಯಾಗಿ ಕೆಲವು ಸಮಯ ಕಾಲ ಒಟ್ಟಾಗಿ ಇರುತ್ತಾರೆ. ಇದಕ್ಕೆ ಮುಖ್ಯ ಕಾರಣ ಅಧುನಾ ಪ್ರತ್ಯೇಕವಾದ ಮನೆಯೊಂದನ್ನು ಕಟ್ಟಿಸುತ್ತಿದ್ದಾರೆ. ಈ ಮನೆ ಪೂರ್ತಿಯಾಗುವ ತನಕ ಇಬ್ಬರು ಜತೆಯಲ್ಲಿಯೇ ಬದುಕು ಕಟ್ಟುತ್ತಾರೆ ಎನ್ನುವ ಒಳ ಒಪ್ಪಂದವೊಂದು ಇಬ್ಬರ ನಡುವೆ ಮೂಡಿದೆ. ಅಂದಾಹಾಗೆ ಡೈವೋರ್ಸ್‌ಗೆ ಕಾರಣಗಳನ್ನು ಎಲ್ಲಿಯೂ ಇಬ್ಬರು ತಿಳಿಸಿಲ್ಲ. ಖಾಸಗಿ ವಿಷಯಗಳನ್ನು ಬಹಿರಂಗಪಡಿಸುವುದಿಲ್ಲ. ದಯವಿಟ್ಟು ಆ ಡಿಟೇಲ್ಸ್ ಗಳನ್ನು ಮಾತ್ರ ಕೇಳಬೇಡಿ ಅಂತಾ ವಿಚ್ಛೇದನದ ಹಾದಿಯಲ್ಲಿರುವ ಈ ದಂಪತಿ ಮನವಿ ಮಾಡಿದ್ದಾರೆ. ಟೋಟಲಿ ಫರ್ಹಾನ್ ಹಾಗೂ ಅಧುನಾ ಎನ್ನುವ ಸುಂದರ ಬದುಕಿನ ಕನ್ನಡಿಯೊಂದು ಒಡೆದು ನುಚ್ಚುನೂರಾಯಿಗಿರೋದು ಮಾತ್ರ ಕಟು ಸತ್ಯ.