ನಾಲ್ಕರ ಹರೆಯದ ಫಾತಿಮಾ ಮುಂಜಾನೆ ಹೊತ್ತು ಮಲಗಿಕೊಂಡೇ ಒಂದು ಕನಸ್ಸು ಕಂಡಳು. ಅದೇನಪ್ಪಾ ಅಂದರೆ ಬೆನ್ನಿಗೆ ಪುಟ್ಟ ಚೀಲ ಹಾಕಿಕೊಂಡು ಶಾಲೆಗೆ ಹೋಗುವ ಕನಸ್ಸು. ತಕ್ಷಣ ತಾಯಿ ಬಂದು ಫಾತಿಮಾಳನ್ನು ಎಬ್ಬಿಸಿದಾಗಲೇ ಗೊತ್ತಾಯಿತು ತಾನು ಶಾಲೆಗೆ ಹೋಗುತ್ತಿಲ್ಲ. ಬದಲಾಗಿ ಮನೆಯಲ್ಲಿಯೇ ಉಳಿದುಕೊಂಡಿದ್ದೇನೆ. ಆದರೆ ತನ್ನ ಇಬ್ಬರು ಸಹೋದರರು ಮಾತ್ರ ಶಾಲೆಗೆ ಹೋಗುತ್ತಿದ್ದಾರೆ ಎನ್ನುವ ಸತ್ಯ ಗೊತ್ತಾದಾಗ ಕಣ್ಣಿನಲ್ಲಿ ನೀರು ತುಂಬಿಕೊಂಡಿತು.
ಫಾತಿಮಾ ದಿನಾಲೂ ಶಾಲೆಯ ದಾರಿಯನ್ನು ಹುಡುಕುತ್ತಿದ್ದಾಳೆ. ಈ ಮಾತನ್ನು ಬೇರೆ ಯಾರು ಹೇಳಿದ್ದಲ್ಲ ಪಾಕಿಸ್ತಾನದ ಬಲ್ವಾರ್ ಪುರದಲ್ಲಿ ಕೂತು ಖುದ್ದು ಅವಳೇ ಸ್ಕೈಪ್ನಲ್ಲಿ ಹೇಳಿಕೊಂಡಿದ್ದಾಳೆ. ಪಾಕಿಸ್ತಾನದಲ್ಲಿ ಬರೋಬರಿ ೧೩ ಮಿಲಿಯನ್ ಅಂದರೆ ಲೆಕ್ಕಚಾರದ ಪ್ರಕಾರ ೧ ಕೋಟಿ ೩೦ ಲಕ್ಷ ಹುಡುಗಿಯರು ಶಾಲೆಗೆ ಹೋಗ್ತಾನೇ ಇಲ್ಲ. ೫೩ ಮಿಲಿಯದಷ್ಟು ೫-೧೬ರ ಅಸುಪಾಸಿನ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಇದೆ. ಇದರಲ್ಲೂ ಶೇ.೫೫ರಷ್ಟು ಹುಡುಗಿಯರು ಎಂದರೆ ಆಶ್ಚರ್ಯ ಪಡಲೇಬೇಕು.
ವಿಶ್ವದಲ್ಲಿಯೇ ಅತೀ ಹೆಚ್ಚು ಹುಡುಗಿಯರು ಶಾಲೆಗೆ ಹೋಗುವ ಅವಕಾಶವನ್ನು ತಪ್ಪಿಸಿಕೊಂಡವರಲ್ಲಿ ಪಾಕಿಸ್ತಾನ ಮೂರನೇ ಸ್ಥಾನದಲ್ಲಿ ಬಂದು ನಿಲ್ಲುತ್ತದೆ. ೨೦೧೨ರಲ್ಲಿ ಮಲಾಲ ಯೂಸಫ್ ಎನ್ನುವ ಪುಟ್ಟ ಬಾಲೆ ಶಾಲೆಗೆ ಹೋಗುತ್ತಿದ್ದಾಗ ತಾಲಿಬಾನ್ ಉಗ್ರರು ಅವಳಿಗೆ ಗುಂಡು ಹಾಕಿದ ಪ್ರಕರಣದಿಂದ ತಾಲಿಬಾನ್ನಲ್ಲಿ ಹುಡುಗಿಯರಿಗೂ ಶಿಕ್ಷಣದ ಭಾಗ್ಯ ಪ್ರಾಪ್ತಿಯಾಗಿತ್ತು.
photo: Flickr