ಅದಕ್ಕಿಂತಲೂ ಘೋರವಾದ ಸತ್ಯ ಅಂದ್ರೆ ಮುದುಕಪ್ಪ ಹಾಸಿಗೆಯಲ್ಲಿ ಪ್ರಾಣ ಬಿಟ್ಟಾಗ ಸ0ಭೋಗ ಸ್ಥಿತಿಯಲ್ಲಿದ್ದ ವೇಶ್ಯೆಯನ್ನೂ ಆಸ್ಪತ್ರೆ ಸಿಬ್ಬಂದಿ ಶವದ ಜೊತೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆ. ಒಂದೇ ಬ್ಲ್ಯಾಂಕೆಟ್ ಹೊದ್ದು ಮಲಗಿದ್ದ ತಾತಪ್ಪ ಹಾಗೂ ವೇಶ್ಯೆಯನ್ನು ಬೇರ್ಪಡಿಸಲು ಸಮಯವಿಲ್ಲದ ಕಾರಣ ಆಕೆಯನ್ನೂ ಶವದ ಜೊತೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರಣ ಆಸ್ಪತ್ರೆಗೆ ಸಾಗಿಸುವಾಗ ತಾತಪ್ಪ ಇನ್ನೂ ಜೀವಂತವಾಗಿರುವ ಭರವಸೆ ಹೊಂದಿದ್ದ ಆಸ್ಪತ್ರೆ ಸಿಬ್ಬಂದಿ, ಒಂದು ವೇಳೆ ಇಬ್ಬರನ್ನೂ ಬೇರ್ಪಡಿಸಿದರೆ ವಿವಿಧ ಕಾರಣಗಳಿಂದ ಇಬ್ಬರ ಜೀವಕ್ಕೂ ಅಪಾಯವಿದೆ ಎಂದು ಮನಗಂಡು ಈ ರೀತಿ ತಾತಪ್ಪನ ಮೇಲೆ ಮಲಗಿದ್ದ ವೇಶ್ಯೆಯನ್ನೂ ಆಸ್ಪತ್ರೆಗೆ ಸಾಗಿಸಿದ್ದಾರಂತೆ.
ಈ ವೇಳೆ ಆಸ್ಪತ್ರೆಯಲ್ಲಿದ್ದ ಸಾರ್ವಜನಿಕರು ಈ ದೃಶ್ಯ ನೋಡಿ ಮೂಖವಿಸ್ಮೀತರಾಗಿದ್ದು, ವೇಶ್ಯೆ ಯಾರಿಗೂ ಕಾಣಬಾರದೆಂದು ಅವರು ಹೊದ್ದು ಮಲಗಿದ್ದ ಬ್ಲ್ಯಾಂಕೆಟ್ ಸಮೇತ ಆಪರೇಶನ್ ಥಿಯೆಟರ್‌ಗೆ ಕೊಂಡೊಯ್ಯಲಾಗಿದೆ. ಆದರೆ ದುರದೃಷ್ಟವಶಾತ ತಾತಪ್ಪ ದಾರಿ ಮಧ್ಯೆಯೇ ಸಾವನ್ನಪ್ಪಿದ್ದು, ವೇಶ್ಯೆಯುನ್ನು ಆತನಿಂದ ಬೇರ್ಪಡಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಲಂಡನ್‌ನ ಪ್ರಸಿದ್ಧ ಲೈಂಗಿಕ ತಜ್ಞ ಡಾ. ಜಾನ್ ಡೀನ್, ಸಂಭೋಗ ಸ್ಥಿಯಲ್ಲಿ ವ್ಯಕ್ತಿ ಸತ್ತಿದ್ದರಿಂದ ಕೂಡಲೇ ಮಹಿಳೆಯನ್ನು ಆತನಿಂದ ಬೇರ್ಪಡಿಸುವುದರಿಂದ ಆಕೆಯ ಜೀವಕ್ಕೂ ಅಪಾಯ ಎದುರಾಗುವ ಸಂಭವವಿತ್ತು ಎಂದು ತಿಳಿಸಿದ್ದಾರೆ.