ದೊಡ್ಡ ಸುದ್ದಿ

ಹಲ್ಲಿ ದೇಹದ ಯಾವ ಅಂಗದ ಮೇಲೆ ಬಿದ್ದರೆ ಏನಾಗುತ್ತದೆ?

ಕೆಲವು ಸಂಸ್ಕೃತಿಯಲ್ಲಿ ಹಲ್ಲಿ ಬಿದ್ದರೆ ಉತ್ತಮ ಎಂದು ಹೇಳಿದರೆ ಮತ್ತೆ ಕೆಲವು ಸಂಸ್ಕೃತಿಯಲ್ಲಿ ಇದನ್ನು ಕೆಟ್ಟದು ಎಂದು ಹೇಳುತ್ತಾರೆ. ಹಲ್ಲಿ ದೇಹದ ಮೇಲೆ ಬಿದ್ದರೆ ಏನಾಗುತ್ತದೆ ನೋಡಿ…

  • ತಲೆಯ ಮೇಲೆ ಬಿದ್ದರೆ ಕೆಡುಕು ಸಂಭವ
  • ಕೂದಲಿನ ಮೇಲೆ ಬಿದ್ದರೆ ಶುಭವಾಗುತ್ತದೆ.
  • ಮೇಲಿನ ತುಟಿಗೆ ಬಿದ್ದರೆ ನಿಮ್ಮ ಐಶ್ವರ್ಯವೆಲ್ಲಾ ಕರಗುತ್ತದೆ.
  • ಕೆಳತುಟಿಯ ಮೇಲೆ ಬಿದ್ದರೆ ನಿಮಗೆ ಐಶ್ವರ್ಯ ದೊರಕಲಿದೆ.
  • ಮುಖದ ಮೇಲೆ ಬಿದ್ದರೆ ಹತ್ತಿರದವರಲ್ಲಿ ಯಾರಿಗಾದರೂ ಪ್ರಾಣಾಪಾಯ.
  • ಹುಬ್ಬುಗಳ ಮೇಲೆ ಬಿದ್ದರೆ ಧನಾಗಮನ.
  • ಮೊಣಕಾಲಿನ ಗಂಟಿನ ಮೇಲೆ ಬಿದ್ದರೆ ನಿಮಗೆ ಶುಭವಾಗುವುದು.
  • ಗಲ್ಲದ ಮೇಲೆ ಬಿದ್ದರೆ ಹಿಂದಿನ ತಪ್ಪಿಗೆ ಶಿಕ್ಷೆಯಾಗುವ ಸಂಭವವಿದೆ.
  • ಮೂಗಿನ ಮೇಲೆ ಬಿದ್ದರೆ ಆರೋಗ್ಯ ಕೆಡಲಿದೆ.
  • ಪಾದಗಳ ಮೇಲೆ ಬಿದ್ದರೆ ಶೀಘ್ರದಲ್ಲಿಯೇ ದೂರಪ್ರಯಾಣದ ಸೌಭಾಗ್ಯವಿದೆ.
  • ಬಲಗಿವಿಯ ಮೇಲೆ ಬಿದ್ದರೆ ನಿಮ್ಮ ಆರೋಗ್ಯ ಮತ್ತು ಆಯಸ್ಸು ವೃದ್ಧಿ.
  • ಕುತ್ತಿಗೆಯ ಮೇಲೆ ಬಿದ್ದರೆ ವೈರಿಗಳು ತನ್ನಿಂತಾನೇ ನಾಶವಾಗುತ್ತಾರೆ.
  • ಎಡಗೈಯ ಮೇಲೆ ಬಿದ್ದರೆ ನಿಮ್ಮ ಲೈಂಗಿಕ ಜೀವನ ತೃಪ್ತಿಕರ.
  • ಹಿಮ್ಮಡಿಯ ಗಂಟಿನ ಮೇಲೆ ಬಿದ್ದರೆ ಶುಭವಾಗಲಿದೆ.
  • ಬಲಗೈ ಮೇಲೆ ಬಿದ್ದರೆ ನಿಮ್ಮ ಆರೋಗ್ಯ ಕೆಡಲಿದೆ.
  • ಹೊಕ್ಕುಳ ಮೇಲೆ ಬಿದ್ದರೆ ನಿಮಗೆ ಅಮೂಲ್ಯ ಮಣಿಗಳು ಮತ್ತು ರತ್ನಗಳು ಲಭಿಸಲಿವೆ.
  • ತೊಡೆಗಳ ಮೇಲೆ ಬಿದ್ದರೆ ನಿಮ್ಮ ತಂದೆತಾಯಿಯರಿಗೆ ಬೇಸರ, ಅಸಂತೋಷ.