ಭಾನುವಾರ : ಭಾಗ್ಯಶಾಲಿ, ಅಧಿಕ ಆಯಸ್ಸನ್ನು ಹೊಂದಿರುತ್ತಾರೆ. ಕಡಿಮೆ ಮಾತನಾಡುತ್ತಾರೆ. ಉತ್ತಮ ಕಲಾವಿದರಾಗಿರುತ್ತಾರೆ ಇವರು. ಈ ವಾರ ಹುಟ್ಟಿದವರಿಗೆ ಸನ್ಮಾನ – ಗೌರವ ಸಿಗುತ್ತದೆ. ಅದ್ಭುತ ಅಭಿರುಚಿ ಹೊಂದಿರುತ್ತಾರೆ ಹಾಗೂ ಎಲ್ಲರನ್ನೂ ಸಂತೋಷವಾಗಿಡುವ ಗುಣ ಇವರಲ್ಲಿರುತ್ತದೆ.
ಸೋಮವಾರ : ಹಸನ್ಮುಖರಾಗಿರುತ್ತಾರೆ ಅಲ್ಲದೇ ಒಳ್ಳೆಯದನ್ನೆ ಮಾತನಾಡುತ್ತಾರೆ. ಜ್ಞಾನಿ ಹಾಗೂ ಬಹದ್ಧೂರ್ ಆಗಿರುತ್ತಾರೆ. ಕಫಕ್ಕೆ ಸಂಬಂಧಿಸಿದ ರೋಗದಿಂದ ಬಳಲುವ ಸಾಧ್ಯತೆ ಇದೆ. ಇವರಿಗೆ ಎಲ್ಲಾ ರೀತಿ ಸುಖ ಸೌಲಭ್ಯ ಸಿಗುತ್ತದೆ. ಇವರೂ ಸಹ ಉತ್ತಮ ಕಲಾವಿದರಾಗಿರುತ್ತಾರೆ ಹಾಗೂ ಪರಿಶ್ರಮ ಜೀವಿಯಾಗಿರುತ್ತಾರೆ.
ಮಂಗಳವಾರ : ಉಗ್ರ ಸ್ವಭಾವವನ್ನು ಹೊಂದಿರುತ್ತಾರೆ. ಇವರು ಹೆಚ್ಚಾಗಿ ವಿವಾದದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿರುತ್ತಾರೆ. ಅಷ್ಟೇ ಅಲ್ಲಾ ಇವರಿಗೆ ತ್ವಚೆಗೆ ಸಂಬಂಧಿಸಿದ ರೋಗ ಬರಲೂ ಬಹುದು. ಸಾಹಸಿ ಮತ್ತು ಬಹೂದ್ಧೂರಿ ಸ್ವಭಾವದವರಾದ ಇವರು ಕ್ರಿಯೇಟಿವ್ ಜನ ಸಹ ಆಗಿರುತ್ತಾರೆ. ಹೆಚ್ಚು ಒತ್ತಡದಿಂದ ಕೂಡಿರುತ್ತಾರೆ ಇವರು. ಒಂದು ಒಳ್ಳೆ ಮಾತು ಎಂದರೆ ಉತ್ತಮ ನಾಯಕನಾಗುವ ಗುಣ ಇವರಲ್ಲಿದೆ.
ಬುಧವಾರ : ಬುಧವಾರ ಜನಿಸಿದವರು ಧಾರ್ಮಿಕ ಮನೋಭಾವದವರಾಗಿರುತ್ತಾರೆ. ಇವರು ಬುದ್ಧಿಮತ್ತೆ ಹೆಚ್ಚಾಗಿರುತ್ತದೆ. ಮಾತು ಸವಿಯಾಗಿರುತ್ತದೆ. ಬುದ್ಧಿ ಉಪಯೋಗಿಸಿ ಕೆಲಸ ಮಾಡಿದರೆ ಇವರಿಗೆ ಲಾಭ ಖಂಡಿತಾ. ಕೆಲವೊಂದು ಬಾರಿ ಕೇರ್ಲೆಸ್ ಕೂಡಾ ಆಗಿರುತ್ತಾರೆ. ಜನರನ್ನು ತನ್ನತ್ತ ಸುಲಭವಾಗಿ ಆಕರ್ಷಿಸುತ್ತಾರೆ. ಅಷ್ಟೇ ಅಲ್ಲಾ ಇವರು ಬಹುಮುಖ ಪ್ರತಿಭೆ ಸಹ ಆಗಿರುತ್ತಾರೆ.
ಗುರುವಾರ : ಇವರು ಬುದ್ಧಿವಂತರಾಗಿರುತ್ತಾರೆ. ಏನಾದರು ಕಷ್ಟ ಬಂದರೆ ಅದಕ್ಕೆ ಯಾವತ್ತೂ ಹೆದರುವುದಿಲ್ಲ. ಒಳ್ಳೆಯ ಫ್ರೆಂಡ್ ಆಗಿರುತ್ತಾರೆ. ಭಾಗ್ಯಶಾಲಿಯೂ ಆಗಿರುತ್ತಾರೆ. ಕೆಲವು ಮಾತಿನಲ್ಲಿ ಕಠೋರವಾಗಿರುತ್ತಾರೆ. ಯಾವಾಗಲೂ ಖುಶಿ ಖುಶಿಯಾಗಿರುತ್ತಾರೆ. ಇವರದ್ದು ಅಸಾಧಾರಣ ವ್ಯಕ್ತಿತ್ವವಾಗಿರುತ್ತದೆ.
ಶುಕ್ರವಾರ : ಇವರು ಅತ್ಯುತ್ತಮ ವ್ಯಕ್ತಿಯಾಗಿರುತ್ತಾರೆ. ಸಲನಶೀಲ ವ್ಯಕ್ತಿತ್ವ ಇವರದ್ದಾಗಿರುತ್ತದೆ. ಕಷ್ಟ ಬಂದಾಗ ಇವರು ಹೆದರುವುದಿಲ್ಲ ಬದಲಾಗಿ ಮುನ್ನುಗ್ಗುತ್ತಾರೆ. ಉತ್ತಮ ಕಲಾವಿದರೂ ಆಗಿರುತ್ತಾರೆ. ಇವರಿಗೆ ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಬುದ್ಧಿವಂತರಾಗಿರುವ ಇವರಿಗೆ ಸಮಾಜದಲ್ಲಿ ಗೌರವ ಪ್ರಾಪ್ತಿಯಾಗುತ್ತದೆ.
ಶನಿವಾರ : ಕೃಷಿ ವ್ಯಾಪಾರದಲ್ಲಿ ಶನಿವಾರ ಹುಟ್ಟಿದವರಿಗೆ ಲಾಭ ದೊರೆಯಲಿದೆ. ತಾಂತ್ರಿಕವಾಗಿ ಇವರು ಇಂಟೆಲಿಜೆಂಟ್ ಆಗಿರುತ್ತಾರೆ. ಸಣ್ಣ ವಯಸ್ಸಿನಲ್ಲಿಯೇ ಇವರಿಗೆ ಸಮಸ್ಯೆಗಳು ತಲೆದೋರುತ್ತವೆ. ಮಿತ್ರರೊಂದಿಗೆ ಉತ್ತಮವಾಗಿರುತ್ತಾರೆ. ಮನೆಯಲ್ಲಿ ಸುಖ ಸಂತೋಷ ಇರುತ್ತದೆ. ಅಲ್ಲದೇ ಬೇರೆ ವ್ಯಕ್ತಿಗಳ ಬಗ್ಗೆ ಸ್ವಲ್ಪ ಮಟ್ಟಿಗೆ ಹೊಟ್ಟೆಕಿಚ್ಚು ಪಡುವ ಸ್ವಭಾವ ಸಹ ಇವರಿಗಿದೆ. ಆದರೆ ಯಾವುದೇ ವಿಷಯದಲ್ಲಿ ರಿಸ್ಕ್ ತೆಗೆದುಕೊಳ್ಳಲು ಅವರು ಇಷ್ಟಪಡುವುದಿಲ್ಲ.