ಶವರ್ : ಬಾಲಿವುಡ್- ಹಾಲಿವುಡ್ ಚಿತ್ರಗಳಲ್ಲಿ ನೀವು ನೋಡಿರಬಹುದು ಕಪಲ್ಸ್ ಶವರ್ ಕೆಳಗೆ ಜೊತೆಯಾಗಿ ರೊಮ್ಯಾನ್ಸ್ ಮಾಡುವುದು. ಅದನ್ನು ನೀವು ಸಹ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿರಬಹುದು. ಆದರೆ ಎಚ್ಚರವಿರಲಿ… ಯಾಕಂದ್ರೆ ಬಾತ್‌ರೂಮ್‌ನಲ್ಲಿ ಕೆಳಗೆ ಬಿದ್ದ ಸೋಪ್, ಶಾಂಪೂ ಮೇಲೆ ನೀವು ಕಾಲಿಟ್ಟು ಜಾರಿ ಬಿದ್ದರೆ ಏನಾಗಬಹುದು ಯೋಚಿಸಿ.
ಕಾರಿನ ಬ್ಯಾಕ್ ಸೀಟ್‌ನಲ್ಲಿ : ಲಾಂಗ್ ಡ್ರೈವ್ ಹೋಗುವ ಸಂದರ್ಭದಲ್ಲಿ ಹಲವಾರು ಬಾರಿ ಪ್ರೇಮಿಗಳ ಮಧ್ಯೆ ದೈಹಿಕ ಸಂಬಂಧ ಏರ್ಪಡಬಹುದು. ಆವಾಗ ಕಾರಿನ ಹಿಂದಿನ ಸೀಟು ನಿಮ್ಮ ಸಂಬಂಧಕ್ಕೆ ಸಾಕ್ಷಿಯಾಗಬಹುದು. ಆದರೆ ಆಗ ನೀವು ಎಚ್ಚರ ವಹಿಸಬೇಕು. ಯಾಕೆ ಎಂದರೆ ನೀವು ಜೊತೆಯಾಗುವ ಸಂದರ್ಭದಲ್ಲಿ ಕಾರಿನ ಹೊರಗಿನಿಂದ ಯಾರಾದರು ಒಳಗೆ ನೋಡುವ ಸಂದರ್ಭ ಇದೆ ಅಥವಾ ಪೊಲೀಸರು ಬರುವ ಸಾಧ್ಯತೆ ಸಹ ಇದೆ.
ಬಾತ್ ಟಬ್ : ಬಾತ್ ಟಬ್‌ನಲ್ಲಿ ಸೆಕ್ಸ್ ಮಾಡುವ ಸಂದರ್ಭದಲ್ಲಿ ಸುರಕ್ಷತೆಗೆ ಹೆಚ್ಚಿನ ಮಹತ್ವ ಕೊಡಬೇಕು. ಇಲ್ಲವಾದಲ್ಲಿ ನಿಮ್ಮ ಗುಪ್ತ ಅಂಗದ ಒಳಗೆ ಸಾಬೂನು ನೀರು ಸೇರಿಕೊಂಡು ಏನಾದರು ಸಮಸ್ಯೆ ಏರ್ಪಡುವ ಸಂದರ್ಭ ಇದೆ.
ಮಳೆಯಲ್ಲಿ : ಮಳೆ ಬರುವಾಗ ರೊಮ್ಯಾನ್ಸ್ ಮಾಡುವ ಅನುಭವ ನಿಮಗೆ ಬೇರೆ ಯಾವ ಕಾಲದಲ್ಲಿಯೂ ಸಿಗಲಾರದು. ಇದರ ಸರಿಯಾದ ಉಪಯೋಗ ಪಡೆದುಕೊಳ್ಳುವ ಸಲುವಾಗಿ ಕೆಲವರು ಮಳೆ ಬರುವಾಗಲೆ ಸೆಕ್ಸ್ ಮಾಡಲು ತೊಡಗುತ್ತಾರೆ. ಆದರೆ ಮಳೆ ಬರುವಾಗ ರೊಮ್ಯಾನ್ಸ್ ಮಾಡಿದರೆ ಮತ್ತೆ ನಿಮಗೂ ಹಾಗೂ ನಿಮ್ಮ ಸಂಗಾತಿಗೂ ಶೀತ ಜ್ವರ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಜಾಗೃತೆ ವಹಿಸುವುದು ಉತ್ತಮ.
ಸ್ವಿಮ್ಮಿಂಗ್ ಪೂಲ್ : ಸ್ವಿಮ್ಮಿಂಗ್ ಪೂಲ್‌ನಲ್ಲಿ ಸಂಗಾತಿ ಜೊತೆ ಈಜುತ್ತಾ ಸ್ನಾನ ಮಾಡುತ್ತಾ ಮೋಜು ಅನುಭವಿಸಬಹುದು. ಆದರೆ ಈ ನೀರಿನಲ್ಲಿ ಕ್ಲೋರಿನ್ ಸೇರಿಸಿರುವುದರಿಂದ ಇದು ಆರೋಗ್ಯಕ್ಕೆ ಮಾರಕವಾಗಿದೆ. ಅಲ್ಲದೇ ಮಕ್ಕಳು ಅಲ್ಲಿ ಈಜಿ ಮೂತ್ರ ವಿಸರ್ಜನೆ ಸಹ ಮಾಡಿರುತ್ತಾರೆ. ಈಗ ಯೋಚಿಸಿ ಪೂಲ್‌ನಲ್ಲಿ ಸೆಕ್ಸ್ ಮಾಡಬೇಕೆ..? ಬೇಡವೇ ಎಂದು…
ಪಾರ್ಕ್ : ಕೆಲವು ವ್ಯಕ್ತಿಗಳು ರೊಮ್ಯಾನ್ಸ್ ಮಾಡಲು ಬೆಸ್ಟ್ ಜಾಗ ಪಾರ್ಕ್ ಎಂದು ತಿಳಿದುಕೊಂಡಿರುತ್ತಾರೆ. ಆದರೆ ಅಲ್ಲಿ ರೊಮ್ಯಾನ್ಸ್ ಅಥವಾ ಸೆಕ್ಸ್ ಮಾಡಲು ಹೋದರೆ ಆಸ್ಪತ್ರೆ ಸೇರಬಹುದು. ಯಾಕೆಂದರೆ ಅಲ್ಲಿ ಗಿಡಗಳಲ್ಲಿರುವ ಕೀಟಗಳು ನಿಮ್ಮ ದೇಹದ ಮೇಲೆ ಬರಬಹುದು ಅಥವಾ ಗುಪ್ತಾಂಗದ ಒಳಗೆ ಹೋಗುವ ಸಾಧ್ಯತೆ ಇದೆ.
ಆದುದರಿಂದ ಇನ್ನು ಮುಂದಾದರು ಸೆಕ್ಸ್ ಮಾಡುವಾಗ ಸರಿಯಾದ ಜಾಗ ಆಯ್ಕೆ ಮಾಡಿ. ಇಲ್ಲವಾದರೆ ಪರಿಣಾಮ ಸರಿಯಾಗಿರಲ್ಲ….