ಹೊಸ ಸುದ್ದಿ

ಹೆಣ್ಣು ನಾಯಿ ಮೇಲೆ ರೇಪ್‌… ಕಾಮುಕನ ಸುಳಿವು ಕೊಟ್ರೆ 1 ಲಕ್ಷ ರೂ. ಬಹುಮಾನ !

ಘಟನೆ ನಡೆದಿರುವುದು ಕೇರಳದಲ್ಲಿ. ಆದರೆ ನಿರ್ಧಿಷ್ಟ ಪ್ರದೇಶದ ಬಗ್ಗೆ ವಿಡಿಯೋದಲ್ಲಿ ಸೆರೆಯಾಗಿಲ್ಲ. ವ್ಯಕ್ತಿಯೋರ್ವ ನಾಯಿ ಮೇಲೆ ಅತ್ಯಾಚಾರವೆಸಗುತ್ತಿರುವ ಎರಡು ನಿಮಿಷದ ವಿಡಿಯೋ ವಾಟ್ಸ್‌‌ಪ್‌‌ನಲ್ಲಿ ಹರಿದಾಡುತ್ತಿದೆ.

ಮಲಯಾಳಂನಲ್ಲಿ ಮಾತನಾಡುತ್ತಿರುವ ವ್ಯಕ್ತಿಯೋರ್ವ ಈ ಕೃತ್ಯವೆಸಗಿರುವ ಬಗ್ಗೆ ನಿಖರವಾಗಿ ತಿಳದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಾಣಿ ಹಕ್ಕುಗಳ ಸಂಘಟನೆ ದೂರು ದಾಖಲಿಸಿದ್ದು, ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹೇಳಿದೆ.

ನಾಯಿ ಮೇಲೆ ಅತ್ಯಾಚಾರವೆಸಗುತ್ತಿದ್ದ ಸಮಯದಲ್ಲಿ ಅದು ತೀವ್ರ ದೈಹಿಕ ಮತ್ತು ಮಾನಸಿಕ ಆಘಾತಕ್ಕೆ ಒಳಗಾಗಿದೆ ಎಂದು ದೂರು ದಾಖಲಾಗಿದೆ. ಆರೋಪಿಗಾಗಿ ತೀವ್ರ ಶೋಧ ಕಾರ್ಯ ನಡೆಸಿರುವ ಕೇರಳ ಪೊಲೀಸರು ಆತನನನ್ನು ಹುಡುಕಿ ಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.