ಸಿಟಿ ಸುದ್ದಿ

ಹೋಟೆಲ್ ಮೆನುವಿಗೆ ಆಮಂತ್ರಣ ಪತ್ರದ ಟಚ್

ಕಾಸರಗೋಡು ನಗರದ ರಾಷ್ಟ್ರೀಯ ಹೆದ್ದಾರಿ ಕರಂದಕ್ಕಾಡು ಬಳಿ ಅಶ್ವಿನಿ ನಗರದ ಸಸ್ಯಾಹಾರಿ ಹೊಟೇಲ್ ಉಡುಪಿ ಆರ್ಯಭವನ ಎದುರು ಆಮಂತ್ರಣ ಪತ್ರಿಕೆಯನ್ನು ಹಾಕಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ಈ ಆಮಂತ್ರಣ ಪತ್ರಿಕೆ ಇದೀಗ ಸೋಶಿಯಲ್ ಮೀಡಿಯಗಳಲ್ಲಿ ಹರಿದಾಡುತ್ತಿದೆ.
ಆಮಂತ್ರಣ ಪತ್ರಿಕೆಯನ್ನು ಈ ಸಸ್ಯಾಹಾರಿ ಹೊಟೇಲ್‌ನ ಎದುರು ಇಂಗ್ಲೀಷ್ ಭಾಷೆಯಲ್ಲಿ ಮುದ್ರಿಸಿ ಹಾಕಲಾಗಿದೆ. ಈ ಹೊಟೇಲ್‌ನಲ್ಲಿ ಲಭ್ಯವಿರುವ ವಿವಿಧ ತಿಂಡಿಗಳ ಹೆಸರನ್ನು ಜೋಡಿಸಿಕೊಂಡು ಮದುವೆ ಆಮಂತ್ರಣ ರೀತಿಯಲ್ಲಿ ಕ್ರೊಢೀಕರಿಸಲಾಗಿದೆ. ಕೇರಳ ಮಾದರಿಯ ತಿಂಡಿಗಳ ಹೆಸರಿರುವುದರಿಂದ ಕೆಲವರಿಗಂತೂ ಅರ್ಧವಾಗದಿದ್ದರೂ, ಕರ್ನಾಟಕ ಸಹಿತ ದೂರದೂರಿನಿಂದ ಬರುವವರಿಗೆ ಅಚ್ಚರಿಯನ್ನುಂಟು ಮಾಡಿದೆ. ಪ್ರತಿಯೊಬ್ಬರು ಮೊಬೈಲ್ ಮೂಲಕ ಫೋಟೋ ಕ್ಲಿಕ್ಕಿಸುದಕ್ಕಂತೂ ಮರೆಯುವುದಿಲ್ಲ. ಇದರಲ್ಲಿ ಮಸಾಲೆ ದೋಸೆ ಹಾಗೂ ಉದ್ದಿನ ವಡೆಯ ಚಿತ್ರವನ್ನು ಸಹ ಹಾಕಲಾಗಿದೆ.