ಈ ಸಂದರ್ಭದಲ್ಲಿ ಗೆಳೆಯನ ಜೀವನ ಚರಿತ್ರೆ ಬಿಡುಗಡೆ ಮಾಡುವ ಅವಕಾಶ ದೊರೆತಿದ್ದಕ್ಕೆ ಸಂತಸವಾಗಿದೆ ಎಂದ ಅಮಿತಾಬ್ ಸಿನ್ಹಾ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದ್ರು.
ಇದೇ ವೇಳೆ, ಅಪ್ಪನ ಪುಸ್ತಕ ಓದಲು ಬಹಳ ಭಯಪಟ್ಟೆ ಎಂದು ನಟಿ ಸೋನಾಕ್ಷಿ ಹೇಳಿದ್ರು. ಅಪ್ಪ ಅಮ್ಮಂದಿರ ಜೀವನದಲ್ಲಿ ಹಲವು ವಿಷಯಗಳು ನಡೆದಿರುತ್ತವೆ. ಅವುಗಳನ್ನು ಮಕ್ಕಳು ತಿಳಿಯದಿರುವುದು ಒಳ್ಳೆಯದು ಎಂದು ಸೋನಾಕ್ಷಿ ಅಭಿಪ್ರಾಯಪಟ್ಟರು.
ಸಿನ್ಹಾ ಈ ಪುಸ್ತಕದಲ್ಲಿ ಆಫ್ ಸ್ಕ್ರೀನ್, ಆನ್ ಸ್ಕ್ರೀನ್ ರೋಮಾನ್ಸ್ನ್ನು ಓಪನ್ ಆಗಿ ಹೇಳಿಕೊಂಡಿದ್ದಾರೆ. ನಿಜ ಜೀವನದಲ್ಲಿ ನಟಿ ರೀನಾ ರಾಯ್ ಜೊತೆಗಿನ ಪ್ರೇಮಾಯಣ, ಪೂನಂ ಜೊತೆ ಮದುವೆಯಾದ ನಂತರವೂ ರೀನಾ ಜೊತೆ ಪ್ರೇಮಾಯಣ ಮುಂದುವರಿಸಿದ್ದರ ಬಗ್ಗೆ ಸಿನ್ಹಾ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೋನಾಕ್ಷಿ ಓದಲು ಭಯಪಟ್ಟಿದ್ದಾಗಿ ಹೇಳಿಕೊಂಡಿದ್ದಾರೆ.
ಶತೃಘ್ನ ಸಿನ್ಹಾ ನಟನಾಗುವವರೆಗಿನ ಎಲ್ಲ ಅಧ್ಯಾಯಗಳನ್ನು ಸರಾಗವಾಗಿ ಓದುತ್ತಾ ಹೋದೆ. ಆದರೆ ನಟರಾದ ನಂತರದ ಅಧ್ಯಾಯಗಳನ್ನು ಓದಲು ಕಷ್ಟವಾಯ್ತು ಅಂತಾ ಪುತ್ರಿ ಸೋನಾಕ್ಷಿ ಹೇಳಿಕೊಂಡಿದ್ದಾಳೆ.