ಲೈಫ್ ಸ್ಟೈಲ್ ಹೆಲ್ತ್ ಪ್ಲಸ್ ಹೊಸ ಸುದ್ದಿ

ಮಹಿಳೆಯರು ಈ ಡೈಲಾಗ್‌ ಹೇಳಿದ್ರೆ… ಅದರ ಅರ್ಥ ಬೇರೆಯದ್ದೇ ಆಗಿರುತ್ತೆ..!

ನಿಮಗೂ ಸಹ ಇದೇ ರೀತಿ ಅನುಭವ ಆಗಿರಬಹುದು ಅಲ್ವೇ..? ನಿಮ್ಮ ಗರ್ಲ್‌ಫ್ರೆಂಡ್‌ ಅಥವಾ ಪತ್ನಿ ನಿಮ್ಮ ಬಳಿ ಏನೋ ಹೇಳಿರುತ್ತಾರೆ. ಆದರೆ ಅದು ನಿಮಗೆ ಅರ್ಥವಾಗದೆ ಅವರು ನಿಮ್ಮ ಬಳಿ ಜಗಳ ಮಾಡಿರುತ್ತಾರೆ. ಹೇಗಪ್ಪಾ ಈ ಮಹಿಳೆಯರನ್ನು ಅರ್ಥ ಮಾಡಿಕೊಳ್ಳೋದು ಎಂದು ಸಹ ನೀವು ತಲೆ ಚಚ್ಚಿಕೊಂಡಿರಬಹುದು. ಇಲ್ಲಿದೆ ನೋಡಿ ಮಹಿಳೆಯರ ಮಾತಿನ ಒಳ ಅರ್ಥ.

ಡೈಲಾಗ್‌ 1 : ‘ಹೌದು… ನನಗೂ ವ್ಯಾಲಂಟೈನ್‌ ಇಷ್ಟ ಇಲ್ಲ’

ಮಾತಿನ ಅರ್ಥ : ಪ್ರತಿಯೊಬ್ಬ ಮಹಿಳೆಯೂ ತನ್ನ ಸಂಗಾತಿಯಿಂದ ವ್ಯಾಲಂಟೈನ್‌ ಡೇ ಗೆ ಏನಾದರೂ ಗಿಫ್ಟ್‌ ಪಡೆದುಕೊಳ್ಳಲು ಇಷ್ಟಪಡುತ್ತಾರೆ. ಆದರೆ ಅವರು ಇದನ್ನು ಯಾವತ್ತೂ ಹೊರಗೆ ಹೇಳೋದೆ ಇಲ್ಲ. ಸೋ ಇನ್ನೊಂದು ಸಾರಿ ಆಕೆ ಈ ರೀತಿ ಹೇಳಿದರೂ ಸಹ ನೀವು ಅವರಿಗೆ ಚಾಕಲೇಟ್‌, ರೋಸ್‌ ಹಾಗೂ ನಿಮ್ಮ ಪ್ರೀತಿಯ ಧಾರೆ ಎರೆದು ಸಂತೋಷ ಪಡಿಸಿ.

ಡೈಲಾಗ್‌ 2 : ‘ನಾನು ಏನು ಯೋಚನೆ ಮಾಡುತ್ತಿದ್ದೆ ಅಂದ್ರೆ…’

ಮಾತಿನ ಅರ್ಥ : ಈ ಡೈಲಾಗ್‌ ಮೂಲಕ ಅವರು ತಮ್ಮ ಮನದ ಆಸೆಯನ್ನು ಹೇಳಲು ಇಷ್ಟಪಡುತ್ತಾರೆ. ನೀವು ಏನು ಎಂದು ಕೇಳಿದಾಗ ಅವರು ಸುಮ್ಮನೆ ಆಗುವ ಚಾನ್ಸ್‌ ಸಹ ಇದೆ. ಆ ಸಮಯದಲ್ಲಿ ನೀವು ಅವರ ಹತ್ತಿರ ಕುಳಿತು ಪ್ರೀತಿಯಿಂದ ಅವರ ಮನಸ್ಸಿನ ಭಾವನೆಯನ್ನು ಕೇಳಿ. ಅವರ ಹೃದಯ ಒಡೆದು ಹೋಗೋದನ್ನು ಹೀಗೆ ತಡೆಯಿರಿ.

ಡೈಲಾಗ್‌ 3 : ಹಾಗಾದ್ರೆ ನಾವು ಎಲ್ಲಿ ಹೋಗ್ತಾ ಇದ್ದೇವೆ..?

ಮಾತಿನ ಅರ್ಥ : ಮಹಿಳೆಯರು ಈ ಡೈಲಾಗ್‌ ಹೇಳಿದರೆ ಅದರ ಅರ್ಥ ನೀವು ಈ ಬಾರಿ ರೊಮ್ಯಾಂಟಿಕ್‌ ಹಾಲಿಡೇಗೆ ಎಲ್ಲಿಗೆ ಕರೆದುಕೊಂಡು ಹೋಗುತ್ತೀರಿ ಎಂದಲ್ಲ. ಇದರ ಅರ್ಥ ನನಗಾಗಿ ಸ್ವಲ್ಪ ಸಮಯ ಮೀಸಲಿಡಿ. ಶಾಪಿಂಗ್‌, ಡಿನ್ನರ್‌ ಜೊತೆಯಾಗಿ ಮಾಡೋಣ. ನೀವು ಸುಮ್ಮನೆ ಅವರ ಜೊತೆ ಹೋಗಿ ಅವರಿಗೆ ಸ್ಪೆಷಲ್‌ ಫೀಲ್‌ ಮಾಡಬೇಕು ಅಷ್ಟೇ.

ಡೈಲಾಗ್‌ 4 : ನನಗೂ ನಿನ್ನ ಕಾಳಜಿ ಇದೆ…

ಮಾತಿನ ಅರ್ಥ : ನಿಮಗೆ ಯಾವುದೇ ಹುಡುಗಿ ಜೊತೆ ಸಂಬಂಧ ಇಲ್ಲ…. ಆದರೆ ಆ ಮಹಿಳೆ ಮಾತ್ರ ಏನಾದರು ಮಾತನಾಡುವಾಗ ನನಗೆ ನಿನ್ನ ಕಾಳಜಿ ಇದೆ ಎಂದು ಹೇಳಿದರೆ ಅಥವಾ ನಿಮ್ಮ ಬಗ್ಗೆ ಬಹಳ ಮುತುವರ್ಜಿ ವಹಿಸಿದರೆ ಒಂದು ನಿಮಿಷ ಯೋಚನೆ ಮಾಡಿ. ಅವರು ನಿಮ್ಮೊಂದಿಗೆ ಟೈಮ್‌ ಕಳೆಯಲು ಬಯಸುತ್ತಾರೆ ಎಂದು ಅರ್ಥ.

ಡೈಲಾಗ್‌ 5 : ‘ಜೆಲಸ್‌… ಅದೂ ನನಗೆ.. ನೋ’

ಮಾತಿನ ಅರ್ಥ :ಮಹಿಳೆಯರಿಗೆ ಯಾವುದಾದರು ಒಂದು ವಿಷಯದಲ್ಲಿ ಅಸೂಯೆ ಆಗಿಯೇ ಆಗುತ್ತದೆ. ಒಂದು ವೇಳೆ ನೀವು ನಿಮ್ಮ ಪಾರ್ಟ್‌ನರ್‌ನ್ನು ಕರೆದುಕೊಂಡು ಡಿನ್ನರ್‌ಗೆ ಹೋಗುತ್ತೀರಿ. ಅಲ್ಲಿ ಯಾವುದೋ ಒಂದು ಹುಡುಗಿ ನಿಮ್ಮ ಬಳಿಯಿಂದ ಪಾಸ್‌ ಆಗುತ್ತಾಳೆ. ನೀವು ಆಕೆಯನ್ನು ನೋಡುತ್ತೀರಿ.. ಇಷ್ಟೇ ಸಾಕು…  ನಿಮ್ಮ ಸಂಗಾತಿಯಿಂದ ನೂರ ಎಂಟು ಪ್ರಶ್ನೆಗಳು ಬರುತ್ತದೆ. ಆಕೆ ನನಗಿಂತ ಸುಂದರ ಇದ್ದಾಳೆಯೇ..? ಆಕೆಯ ಡ್ರೆಸ್‌ ನನಗಿಂತ ಚೆನ್ನಾಗಿದೆಯೇ..? ಹೀಗೆ ಶುರುವಾದರೆ ಮುಗಿಯೋದೆ ಇಲ್ಲ…