ಹೌದು, ಬಾಲಿವುಡ್‌ನ ಡಾನ್ಸಿಂಗ್ ಸೂಪರ್‌ಸ್ಟಾರ್ ಎಂದೇ ಕರೆಯಿಸಿಕೊಳ್ಳುವ ಮಿಥುನ್ ಚಕ್ರವರ್ತಿಯ ಪುತ್ರಿ ದಿಶಾನಿ ಚಕ್ರವರ್ತಿ ಬಾಲಿವುಡ್‌ಗೆ ಎಂಟ್ರಿ ಆಗುವ ಸೂಚನೆ ನೀಡುತ್ತಿದ್ದಾಳೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಚೆಂದದ ಫೋಟೋಗಳನ್ನು ಪೋಸ್ಟ್ ಮಾಡುತ್ತ ಎಲ್ಲರ ಗಮನ ಸೆಳೆಯುತ್ತಿದ್ದಾಳೆ.
ಮಿಥುನ್ ಪುತ್ರ ಮಿಮೋಹ್ ಈ ಮೊದಲೆ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿ ಆಗಿದೆ. ಅದೇ ರೀತಿ ದಿಶಾನಿ ಸಹ ತನ್ನ ತಂದೆ ಹಾಗೂ ಸಹೋದರನ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವ ಸುಳಿವನ್ನು ನೀಡುತ್ತಿದ್ದಾಳೆ. ಆದರೆ ಈಕೆ ಇದುವರೆಗೂ ಅಶ್ಲೀಲ ಫೋಟೋಗಳನ್ನು ಪೋಸ್ಟ್ ಮಾಡದೇ ಇರುವುದು ವಿಶೇಷ.