ಲಕ್ನೋದ ಎಸ್‌ಜಿಪಿಜಿಐ ಆಸ್ಪತ್ರೆಯ ಸುಶೀಲಾ ಸಚಾನ್ ಎಂಬ ನರ್ಸ್, ‘ಶಾಂತಿ ಮೆಡಿಕೋಜ್’ ಎಂಬ ಮಹಿಳೆಯರ ಹಾಸ್ಟೆಲ್ ನಡೆಸುತ್ತಿದ್ದು, ಈಕೆ ವೈದ್ಯರಿಗೆ ಯುವತಿಯರನ್ನು ಸಪ್ಲೈ ಮಾಡುವ ಪಾಪ ಕೃತ್ಯದಲ್ಲೂ ತೊಡಗಿದ್ದಾಳೆ ಎಂದು ಈ ಬಾಲಕಿ ಆರೋಪಿಸಿದ್ದಾಳೆ.
ಹೀಗೆ ಈ ಹಾಸ್ಟೆಲ್‌ಗೆ ಬಂದ ಈ ಅಪ್ರಾಪ್ತ ಬಾಲಕಿ ಮೇಲೆ ಇದುವರೆಗೂ ಸುಮಾರು 450 ವೈದ್ಯರು ಅತ್ಯಾಚಾರವೆಸಗಿದ್ದಾರೆ ಎಂದು ಬಾಲಕಿ ಪೊಲೀಸರಿಗೆ ದೂರು ನೀಡಿದ್ದಾಳೆ. ಅಲ್ಲದೇ ವೈದ್ಯರಿಂದ ತನ್ನ ಮೇಲೆ ಹಲವು ಬಾರಿ ಗ್ಯಾಂಗ್ ರೇಪ್ ಕೂಡ ನಡೆದಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಬಾಲಕಿ ಹೊರ ಹಾಕಿದ್ದಾಳೆ.
ಹಾಸ್ಟೆಲ್ ಒಳಗೆ ವೈದ್ಯರು ಈಕೆ ಮೇಲೆ ಅತ್ಯಾಚಾರವೆಸಗುತ್ತಿದ್ದರೆ ಸುಶೀಲಾ ಹಾಗೂ ಆಕೆಯ ಗಂಡ ಹೊರಗೆ ಪಹರೆ ಕಾಯುತ್ತಿದ್ದರು ಎಂದು ಕೂಡ ಬಾಲಕಿ ತನ್ನ ದೂರಿನಲ್ಲಿ ತಿಳಿಸಿದ್ದಾಳೆ. ಅಲ್ಲದೇ ಹೀಗೆ ವೈದ್ಯರಿಂದ ಅತ್ಯಾಚಾರಕ್ಕೊಳಗಾದ ಹಲವು ಯುವತಿಯರಿಗೆ ಇದೇ ಹಾಸ್ಟೆಲ್‌ನಲ್ಲಿ ಒತ್ತಾಯದ ಗರ್ಭಪಾತ ಕೂಡ ಮಾಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಸದ್ಯ ಬಾಲಕಿ ನೀಡಿರುವ ದೂರನ್ನು ಸ್ವೀಕರಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.