ಸಿನಿಮಾ ಸುದ್ದಿ

ಸಂಜನಾ ಜತೆಗೆ ಯೋಗ ಮಾಡಲು ಯಾರು ರೆಡಿ!

ಕನ್ನಡದ ನಟಿಯರ ಸಾಲಿನಲ್ಲಿ ಸಂಜನಾ ಸಖತ್ ಹಾಟ್ ಎನ್ನುವ ಕೆಟಗರಿಯಲ್ಲಿ ಸದಾ ನಿಲುಕಾಡುತ್ತಾ ಬಂದವರು. ಕನ್ನಡ ಸಿನಿಮಾಗಳ ಜತೆಯಲ್ಲಿ ಉಳಿದ ಸಿನಿಮಾ ಅಂಗಳದಲ್ಲೂ ಸಿಕ್ಕಾಪಟ್ಟೆ ಖ್ಯಾತಿ ಪಡೆದುಕೊಮಡಿರುವ ಸಂಜನಾ ಈ ಬಾರಿ ಉದ್ಯಮಿಯಾಗುವ ಮೂಲಕ ಸಿನಿ ಬದುಕಿನಿಂದ ಹೊರ ಸರಿದು ಹೊಸ ಉದ್ಯಮದ ಕಡೆಯಲ್ಲಿ ಬದುಕು ಕಟ್ಟುವ ಯೋಜನೆಯೊಂದನ್ನು ಹಾಕಿಕೊಂಡಿದ್ದಾರೆ.
ಅಂದಾಹಾಗೆ ಸಂಜನಾ ಅವರ ಹೊಸ ಬ್ಯುಸಿನೆಸ್ ಏನಪ್ಪಾ ಅಂತೀರಾ. ಇದು ಸಂಜನಾ ಡೈಲಿ ಮಾಡುತ್ತಾ ಬರುತ್ತಿದ್ದ ಯೋಗ ಸಿಸ್ಟಂ. ಅರೇ ಮನೆಯಲ್ಲಿ ಮಾಡುವ ಯೋಗಕ್ಕೂ ಸಂಜನಾ ಕಲಿಸುವ ಯೋಗಕ್ಕೂ ಏನಾದರೂ ಲಿಂಕ್ ಉಂಟಾ..? ಹೌದು. ಸಂಜನಾ ಜನರಿಗೆ ಯೋಗ ಕಲಿಸುವ ಬ್ಯುಸಿನೆಸ್ ಮಾಡುತ್ತಾರೆ. ಇದಕ್ಕಾಗಿ ಈಗಾಗಲೇ ಅಕ್ಷರಾ ಪವರ್ ಯೋಗದ ಪ್ರಾಂಚೈಸಿಯ ಕಚೇರಿಯನ್ನು ಬೆಂಗಳೂರಿನಲ್ಲಿ ಸಂಜನಾ ಅವರ ಹೊಣೆಗಾರಿಕೆಯಲ್ಲಿ ಆರಂಭವಾಗಲಿದೆ. ಕೋರಮಂಗಲದಲ್ಲಿ ಇದಕ್ಕಾಗಿ ಒಂದು 8500 ಸ್ಕ್ವೇರ್‌ಫೀಟ್‌ನಲ್ಲಿ ಈ ಯೋಗದ ಸ್ಟುಡಿಯೋ ನಿರ್ಮಾಣವಾಗುತ್ತಿದೆ.
ಇದರ ಒಳಾಂಗಣ ವಿನ್ಯಾಸ ಪೂರ್ತಿಗೊಂಡಿದೆ. ಸಧ್ಯಕ್ಕೆ ಅದರ ಉದ್ಘಾಟನೆ ನಡೆದು ಸಂಜನಾ ಇಲ್ಲಿ ಬರುವ ಜನರಿಗೆ ತರಬೇತಿ ಕೊಡುತ್ತಾರೆ. ಅಂದಹಾಗೆ ಮೂರು ವರ್ಷಗಳ ಗುತ್ತಿಗೆ ಆಧಾರದಲ್ಲಿ ಸಂಜನಾ ಈ ಯೋಗ ಪ್ರಾಜೆಕ್ಟ್‌ಗೆ ಒಪ್ಪಿಕೊಂಡಿದ್ದಾರೆ. ಈಗಾಗಲೇ 6 ಕನ್ನಡ ಚಿತ್ರಗಳಲ್ಲಿ ಸಂಜನಾ ನಟಿಸುವ ಜತೆಗೆ ತೆಲುಗಿನ ಎರಡು ಚಿತ್ರಗಳಿಗೂ ಬುಕ್ ಆಗಿದ್ದಾರೆ. ಇದರ ಬೆನ್ನಿಗೆ ಹೊಸ ಬ್ಯುಸಿನೆಸ್ ಕೂಡ ಸಂಜನಾಗೆ ಗೆಲುವು ತಂದು ಕೊಡುತ್ತಾ ಎಂದು ಕಾದು ನೋಡಬೇಕು.