ಕಾಂಡೋಮ್ ಮಾರಾಟ ಮಾಡುವುದು ಕೂಡ ಅಪರಾಧನಾ..? ಎನ್ನುವ ಪ್ರಶ್ನೆಯೊಂದು ಸಾರ್ವಜನಿಕ ವಲಯದಲ್ಲಿ ಬಿಸಿಬಿಸಿಯಾಗಿ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ ಇಷ್ಟೇ ನೀಲಿ ಚಿತ್ರದ ತಾರೆ ಸನ್ನಿ ಲಿಯೋನ್ ಹಾಗೂ ನಟ ವೀರ್ದಾಸ್ ಮೇಲೆ ಕಾಂಡೋಮ್ ಮಾರಾಟ ಮಾಡಿದ ವಿಚಾರದಲ್ಲಿ ದಿಲ್ಲಿಯ ಪೊಲೀಸರು ಖಡಕ್ ಆಗಿ ಕೇಸು ಹಾಕಿದ್ದಾರೆ.
ಸನನಿ ಹಾಗೂ ವೀರ್ ದಾಸ್ ಕಾಣಿಸಿಕೊಂಡಿರುವ ಸೆಕ್ಸಿ ಕಾಮೆಡಿ ಚಿತ್ರ ‘ಮಸ್ತಿಝಾದೆ’ಯ ದೃಸ್ಯವೊಂದರಲ್ಲಿ ದೇವಸ್ಥಾನದ ಮುಂದೆ ನಿಂತು ಕಾಂಡೋಮ್ ಮಾರಾಟ ಮಾಡುವ ಸನ್ನಿವೇಶವಿದೆ. ಈ ಸನ್ನಿವೇಶದಿಂದ ಗರಂಗೊಂಡಿರುವ ಕೆಲವು ಮಂದಿ ದಿಲ್ಲಿ ಪೊಲೀಸರಿಗೆ ದೂರು ಕೊಡುವ ಮೂಲಕ ಇಬ್ಬರನ್ನು ಒಳಗೆ ಹಾಕಬೇಕು ಎನ್ನುವ ಬೊಬ್ಬೆ ಕೇಳಿಸಿಕೊಂಡಿದೆ.