ದೊಡ್ಡ ಸುದ್ದಿ ಸಿನಿಮಾ ಸುದ್ದಿ

ನಾಯಿ ಜತೆ ಪ್ರೇಮಿಗಳ ದಿನ ಆಚರಿಸಿದ ನಟಿಮಣಿ!

ಪ್ರೇಮಿಗಳ ದಿನ ಎಂದರೆ ಎರಡು ಧ್ರುವಗಳು ಒಂದು ಸೇರುವುದು ಎನ್ನುವುದು ಸಾಮಾನ್ಯವಾದ ವಿಷ್ಯಾ. ಆದರೆ ಬಾಲಿವುಡ್ ನಟಿ ಅನುಷ್ಕಾ ಶರ್ಮ ಹಾಗೂ ವಿರಾಟ್ ಕೋಹ್ಲಿ ಅವರ ಪ್ರೇಮಿಗಳ ದಿನ ಹೇಗೆ ಇರಬಹುದು ಎನ್ನುವ ಕುತೂಹಲ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿತ್ತು. ಇದಕ್ಕೆ ಕಾರಣ ಇಷ್ಟೇ ಇಬ್ಬರು ತೀರಾ ಇತ್ತೀಚೆಗೆ ಬ್ರೇಕ್ ಆಪ್ ಎನ್ನುವ ಕಾಯಿಲೆಗೆ ಗುರಿಯಾಗಿದ್ದರು.

ಈ ಬಾರಿ ವಿರಾಟ್ ತಮ್ಮ ಕ್ರಿಕೆಟ್ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ . ನಟಿ ಅನುಷ್ಕಾ ಶರ್ಮವಂತೂ ತಮ್ಮ ಅಚ್ಚುಮೆಚ್ಚಿನ ನಾಯಿ ಲ್ಯಾಬ್ರೋಡೋರ್ ತಳಿಯ‘ ಡ್ಯೂಡ್’ ಜತೆಯಲ್ಲಿ ಪಾರ್ಕ್ ಹಾಗೂ ಮನೆಯಲ್ಲಿ ಅನುಷ್ಕಾ ಕಳೆದು ಬಿಟ್ಟಿದ್ದಾಳೆ ಎನ್ನುವ ಸುದ್ದಿ ಬಂದಿದೆ. ತಮ್ಮ ಡ್ಯೂಡ್ ಜತೆಯಲ್ಲಿ ನಿಂತು ಒಂದು ಫೋಟೋ ತೆಗೆದು ಬದುಕಿನಲ್ಲಿ ಸಣ್ಣ ಸಣ್ಣ ವಿಚಾರಗಳಿಂದಲೂ ಖುಷಿ ಪಡಬಹುದು ಎನ್ನುವ ಮಾಹಿತಿಯನ್ನು ಅನುಷ್ಕಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದಾರೆ.