ಕ್ರೀಡಾ ಸುದ್ದಿ ದೊಡ್ಡ ಸುದ್ದಿ

ಕ್ರಿಕೆಟಿಗ ರಾಬಿನ್ ಜತೆಯಾಗುವ ಶೀತಲ್ ಕತೆಯಿದು..

ಕ್ರಿಕೆಟಿಗ ರಾಬಿನ್ ಉತ್ತಪ್ಪ ಮತ್ತು ಅವರ ದೀರ್ಘಕಾಲದ ಗೆಳತಿ ಶೀತಲ್ ಗೌತಮ್ ಅವರ ವಿವಾಹ ಸಮಾರಂಭ ಮಾ.೩ರಂದು ಇಲ್ಲಿನ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ನಡೆಯಲಿದೆ.
ಈ ಬಾರಿಯ ರಣಜಿ ಟ್ರೋಫಿ ಯಲ್ಲಿ ಹ್ಯಾಟ್ರಿಕ್ ಶತಕ ಸಿಡಿಸಿ ಮಿಂಚಿದ್ದ ರಾಬಿನ್‌ಉತ್ತಪ್ಪ, ಕಳೆದ ನವೆಂಬಲ್ಲಿ ಮಾಲ್ದೀವ್‌ನಲ್ಲಿ ಶೀತಲ್‌ಅವರಿಗೆ ಉಂಗುರ ತೊಡಿಸುವ ಮೂಲಕ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.  ರಾಬಿನ್ ಉತ್ತಪ್ಪ ಮತ್ತು ಮಾಜಿ ರಾಷ್ಟ್ರೀಯ ಟೆನಿಸ್ ಆಟಗಾರ್ತಿ ಶೀತಲ್‌ಗೌತಮ್ ಕಳೆದ ಹಲವಾರು ವರ್ಷಗಳಿಂದ ಸ್ನೇಹಿತರಾಗಿದ್ದರು.