ದೊಡ್ಡ ಸುದ್ದಿ ಸಿಟಿ ಸುದ್ದಿ

ಸೆಕ್ಸ್‌ ಕಾರ್ಯಕರ್ತೆಯರಿಗೆ ಸುಲಭ ಸಾಲ

ಮಹಿಳೆಯರು ಸಶಕ್ತರಾಗಲು ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ವೈಯಕ್ತಿವಾಗಿ ಹಾಗೂ ಸಂಘಟನೆಗಳಿಗೆ ಸಾಲ ಒದಗಿಸಲು ಸರ್ಕಾರ ನೂತನ ಯೋಜನೆ ಹಾಕಿಕೊಂಡಿದೆ. ಛತ್ತೀಸ್‌ಗಢ ಮಹಿಳಾ ಕೋಶ ಎಂಬ ನೂತನ ಯೋಜನೆಯಡಿ ಮಹಿಳೆಯರಿಗೆ ವೈಯಕ್ತಿಕ 10,000 ಸಾವಿರ ಹಾಗೂ 1ಲಕ್ಷದವರೆಗೆ ಶೇಕಡಾ 3 ಸುಲಭ ಬಡ್ಡಿ ದರದಲ್ಲಿ  ಗುಂಪು ಸಾಲ ನೀಡಲು ಸರ್ಕಾರ ಮುಂದಾಗಿದೆ. ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದೆ. ಸಾಲಕ್ಕೆ ಸಂಬಂಧಿಸಿದಂತೆ ಅವರಿಂದ ಯಾವುದೇ ರೀತಿಯ ಆಸ್ತಿ ದಾಖಲೆ ಪಡೆಯುವುದಿಲ್ಲ ಎಂದು ಇಲಾಖೆ ತಿಳಿಸಿದೆ.

ಫಲಾನುಭವಿಗಳು ಸಾಲ ಪಡೆಯಲು ಸರ್ಕಾರಿ ವೈದ್ಯರು ನೀಡಿರುವ ವೈದ್ಯಕೀಯ ಪ್ರಮಾಣ ಪತ್ರ ಒದಗಿಸುವುದು ಕಡ್ಡಾಯವಾಗಿದೆ ಎಂದು ಇಲಾಖೆ ತಿಳಿಸಿದೆ.