ಈ ಸರ್ವೇ ಮೂಲಕ ತಿಳಿದು ಬಂದ ಅಂಶ ಏನೆಂದರೆ ಸೆಕ್ಸ್ ಮಾಡಲು ಶನಿವಾರ ಸಂಜೆ 7.37ರ ಸಮಯ ಅತ್ಯಂತ ಉತ್ತಮ ಎಂಬುದು ಗೊತ್ತಾಗಿದೆ. ಅಷ್ಟೇ ಅಲ್ಲಾ ಶನಿವಾರ ಸೆಕ್ಸ್ ಮಾಡೋದೆಂದರೆ ಹಲವಾರು ಜನರು ಸಹ ಇಷ್ಟಪಡುತ್ತಾರೆ ಎಂಬುದು ಸಹ ತಿಳಿದು ಬಂದಿದೆ.
ಸೆಕ್ಸ್ ಟಾಯ್ ಸೇಲ್ ಮಾಡುವ ಲವ್ ಹನಿ ಕಂಪನಿ ನಡೆಸಿದ ಸಮೀಕ್ಷೆಯಲ್ಲಿ 3000 ಜನರು ಭಾಗವಹಿಸಿದ್ದರು. ಇದರಲ್ಲಿ ಶೇಕಡಾ 44ರಷ್ಟು ಜೋಡಿ ಶನಿವಾರ ಸೆಕ್ಸ್ ಮಾಡಲು ಇಷ್ಟ ಎಂದರೆ, 24 ಶೇಕಡಾ ಜನ ಭಾನುವಾರ ಹಾಗೂ 22 ಶೇಕಡಾ ಜನ ಶುಕ್ರವಾರ ಸೆಕ್ಸ್ ಮಾಡಲು ಬೆಸ್ಟ್ ದಿನ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲಾ ಶನಿವಾರ ಜನರು ಸಂಜೆ 4.33ರಿಂದಲೇ ಸೆಕ್ಸ್ ಮಾಡಲು ಇಷ್ಟಪಡುತ್ತಾರೆ ಎಂಬುದು ಸಹ ತಿಳಿದು ಬಂದಿದೆ. ಆದರೆ ಆ ಸಮಯದಲ್ಲಿ ಜನ ಸೆಕ್ಸುವಲ್ ಆಕ್ಟಿವಿಟಿಯಲ್ಲಿ ಹೆಚ್ಚು ಸಕ್ರಿಯರಾಗಿರುವುದಿಲ್ಲ ಎಂದು ಸಹ ಹೇಳಿದ್ದಾರೆ. ಹೆಚ್ಚಿನ ಜನ ತಮ್ಮ ಸಂಗಾತಿ ಬ್ಯುಸಿಯಾಗಿರುವುದರಿಂದ ಯಾವಾಗ ಸೆಕ್ಸ್ ಮಾಡಲು ಸಾಧ್ಯವಾಗುತ್ತದೆ ಹಾಗೂ ಯಾವಾಗ ಸೆಕ್ಸ್ ಮಾಡಬಹುದು ಎಂಬುದರ ಬಗ್ಗೆ ಶೆಡ್ಯೂಲ್ ಸಹ ಮಾಡಿ ಇಡುತ್ತಾರೆ ಎಂಬುದು ಸಮೀಕ್ಷೆ ಮೂಲಕ ತಿಳಿದು ಬಂದಿದೆ.